ಆನಿಯನ್ ಮಿಕ್ಸ್ ಪ್ರಾನ್ ಖಾದ್ಯ ಮಾಡಿ ನೋಡಿ!

ಆನಿಯನ್ ಮಿಕ್ಸ್ ಪ್ರಾನ್ ಖಾದ್ಯ ಮಾಡಿ ನೋಡಿ!

LK   ¦    Sep 04, 2020 08:05:25 PM (IST)
ಆನಿಯನ್ ಮಿಕ್ಸ್ ಪ್ರಾನ್ ಖಾದ್ಯ ಮಾಡಿ ನೋಡಿ!

ಹಸಿ ಈರುಳ್ಳಿಯೊಂದಿಗಿನ ಪ್ರಾನ್(ಸಿಗಡಿ) ಒಂಥರಾ ರುಚಿಯಾಗಿರುತ್ತದೆ. ಇದನ್ನು ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವುದು ಹೇಗೆ ಎಂಬುದರ ವಿವರ ಇಲ್ಲಿದೆ.

ಬೇಕಾಗುವ ಪದಾರ್ಥಗಳು

ಪ್ರಾನ್- 250ಗ್ರಾಂ

ಈರುಳ್ಳಿ- 1 ದೊಡ್ಡ ಗಾತ್ರದ್ದು

ಕರಿಮೆಣಸು ಪುಡಿ- ಅರ್ಧ ಟೀ ಚಮಚ

ಹಸಿಮೆಣಸು- 2

ಕೊತ್ತಂಬರಿ ಸೊಪ್ಪು- ಸ್ವಲ್ಪ

ನಿಂಬೆರಸ- 1 ಟೇಬಲ್ ಚಮಚೆ

ಎಣ್ಣೆ- 1 ಟೇಬಲ್ ಚಮಚ

ಉಪ್ಪು- 1 ಟೀ ಚಮಚೆ

ಮಾಡುವ ವಿಧಾನ ಹೀಗಿದೆ...

ಮೊದಲಿಗೆ ಪ್ರಾನ್‍ನ್ನು ಶುಚಿ ಮಾಡಿಕೊಳ್ಳಬೇಕು. ನಂತರ ಉಪ್ಪು ಹಾಕಿ ಬೇಯಿಸಬೇಕು. ಇನ್ನೊಂದೆಡೆ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.

ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕುದಿಸಿ ಆರಿಸಿ ಅದಕ್ಕೆ ಕತ್ತರಿಸಿದ ಈರುಳ್ಳಿ, ಬೇಯಿಸಿದ ಪ್ರಾನ್, ಕರಿಮೆಣಸುಪುಡಿ, ಕತ್ತರಿಸಿದ ಹಸಿಮೆಣಸು,  ಹಚ್ಚಿದ ಕೊತ್ತಂಬರಿ ಸೊಪ್ಪು, ನಿಂಬೆರಸ ಹಾಗೂ ಅಗತ್ಯವಿದ್ದರೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಆನಿಯನ್ ಮಿಕ್ಸ್ ಪ್ರಾನ್ ರೆಡಿಯಾದಂತೆಯೇ...