ಸ್ಪೆಷಲ್ ಚಿಕನ್ ಮಸಾಲೆ ಫ್ರೈ

ಸ್ಪೆಷಲ್ ಚಿಕನ್ ಮಸಾಲೆ ಫ್ರೈ

LK   ¦    Mar 04, 2019 02:19:26 PM (IST)
ಸ್ಪೆಷಲ್ ಚಿಕನ್ ಮಸಾಲೆ ಫ್ರೈ

ಚಿಕನ್ ತಯಾರಿಸಬಹುದಾದ ಖಾದ್ಯದಲ್ಲಿ ಸ್ಪೆಷಲ್ ಚಿಕನ್ ಮಸಾಲೆ ಫ್ರೈ ಕೂಡ ಒಂದಾಗಿದೆ. ಇದನ್ನು ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.

ಬೇಕಾಗುವ ಪದಾರ್ಥಗಳು ವಿವರ ಹೀಗಿದೆ:

ಚಿಕನ್- ಅರ್ಧ ಕೆಜಿ
ಕಡಲೆಹಿಟ್ಟು- ಕಾಲು ಕೆಜಿ
ಉಪ್ಪು- ರುಚಿಗೆ ತಕ್ಕಷ್ಟು
ಅಡುಗೆ ಸೋಡಾ-ಚಿಟಿಕೆ
ಬೆಳ್ಳುಳ್ಳಿ, ಶುಂಠಿಪೇಸ್ಟ್- ಒಂದೂವರೆ ಚಮಚ
ನಿಂಬೆರಸ- ಒಂದು ಚಮಚ
ಜೀರಿಗೆಪುಡಿ- ಒಂದು ಚಮಚ
ಅರಿಶಿನಪುಡಿ-ಕಾಲು ಚಮಚ
ಮೆಣಸಿನಪುಡಿ- ಒಂದು ಟೀ ಚಮಚ
ಎಣ್ಣೆ- ಕರಿಯಲು ಅಗತ್ಯವಿರುವಷ್ಟು
ಸ್ಪೆಷಲ್ ಚಿಕನ್ ಮಸಾಲೆ ಫ್ರೈ ತಯಾರಿಸುವ ವಿಧಾನ ಹೀಗಿದೆ: ಮೊದಲಿಗೆ ಚರ್ಮ ತೆಗೆದ ಕೋಳಿ ಮಾಂಸವನ್ನು ತೆಗೆದುಕೊಂಡು ಅದನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿ ಶುದ್ಧ ನೀರಿನಿಂದ ತೊಳೆಯಬೇಕು. ಬಳಿಕ ಅದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್, ನಿಂಬೆರಸ, ಜೀರಿಗೆಪುಡಿ, ಅರಶಿನ ಪುಡಿ, ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕಲೆಸಬೇಕು.

ಇನ್ನೊಂದೆಡೆ ಪಾತ್ರೆಯಲ್ಲಿ ಕಡಲೆಹಿಟ್ಟು, ಉಪ್ಪು, ಸೋಡಾಪುಡಿ ಹಾಕಿ ಬಳಿಕ ಸ್ವಲ್ಪ ನೀರು ಸೇರಿಸಿ ಸಾಮಾನ್ಯವಾಗಿ ಬಜ್ಜಿ ಹಿಟ್ಟಿನ ಮಾದರಿಯ ಹಿಟ್ಟನ್ನು ತಯಾರಿಸಿಕೊಳ್ಳಬೇಕು. ಆ ನಂತರ ಅದಕ್ಕೆ ಮೊದಲು ಸಿದ್ಧ ಮಾಡಿಟ್ಟುಕೊಂಡಿರುವ ಕೋಳಿಮಾಂಸದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಬಳಿಕ ಬಾಣಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಕಂದು ಬಣ್ಣ ಬರುವವರೆಗೆ ಮಾಂಸದ ತುಂಡುಗಳನ್ನು ಚೆನ್ನಾಗಿ ಹುರಿದು ತೆಗೆದರೆ ಸ್ಪೆಷಲ್ ಚಿಕನ್ ಮಸಾಲೆ ಫ್ರೈ ರೆಡಿಯಾದಂತೆಯೇ.