ಜನರನ್ನು ನಂಬುವುದು ನನಗೆ ಕಷ್ಟವಾಗಿದೆ. ಇದು ಸಮಸ್ಯೆ ಅಥವಾ ಪ್ರಯೋಜನವೇ ಎಂದು ನನಗೆ ಗೊತ್ತಿಲ್ಲ

ಜನರನ್ನು ನಂಬುವುದು ನನಗೆ ಕಷ್ಟವಾಗಿದೆ. ಇದು ಸಮಸ್ಯೆ ಅಥವಾ ಪ್ರಯೋಜನವೇ ಎಂದು ನನಗೆ ಗೊತ್ತಿಲ್ಲ

Akshara Damle   ¦    Dec 20, 2020 08:00:00 AM (IST)
ಜನರನ್ನು ನಂಬುವುದು ನನಗೆ ಕಷ್ಟವಾಗಿದೆ. ಇದು ಸಮಸ್ಯೆ ಅಥವಾ ಪ್ರಯೋಜನವೇ ಎಂದು ನನಗೆ ಗೊತ್ತಿಲ್ಲ
ಈ ಪ್ರಶ್ನೆಗೆ ಉತ್ತರ ಬಹಳ ಕ್ಲಿಷ್ಟವಾಗಿದೆ. ಏಕೆಂದರೆ ನಾಣ್ಯದ ಎರಡು ಮುಖಗಳಂತೆ ಪ್ರತಿಯೊಂದು ವಿಷಯಕ್ಕೂ ಧನಾತ್ಮಕ ಹಾಗು ಋಣಾತ್ಮಕ ಅಂಶಗಳಿವೆ. ಜನರನ್ನು ನಂಬಲು ನೀವು ನಿಧಾನಿಸುವುದರಿಂದ ಅನವಶ್ಯಕ ತೊಂದರೆಗೆ ಸಿಲುಕುವುದನ್ನು ತಪ್ಪಿಸಬಹುದು. ಅದೇ ಸಮಯದಲ್ಲಿ, ನಂಬಿಕೆಯ ಕೊರತೆಯಿಂದಾಗಿ ನೀವು ಕೆಲವು ಅವಕಾಶಗಳನ್ನು ಕಳೆದುಕೊಳ್ಳಬಹುದು!
 
ಆದ್ದರಿಂದ ಒಬ್ಬ ವ್ಯಕ್ತಿಯನ್ನು ನಂಬುವುದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬುದು ಸಂದರ್ಭಗಳ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಕೆಲವೊಮ್ಮೆ ಇದು ಪ್ರಯೋಜನಕಾರಿಯಾಗಬಹುದು ಮತ್ತು ಕೆಲವೊಮ್ಮೆ ಇದು ಸಮಸ್ಯಾತ್ಮಕವಾಗಿರುತ್ತದೆ.
 
ಸಾಮಾನ್ಯವಾಗಿ ಜನರನ್ನು ನಂಬಲು ಕಷ್ಟವಾಗುವ ಅಂಶವನ್ನು ವಿಸ್ತಾರವಾಗಿ ನೋಡೋಣ! ಜೀವನದಲ್ಲಿ ಯಾರನ್ನೂ ನಂಬಲು ನಿಮಗೆ ಸಾಧ್ಯವಾಗದಿದ್ದರೆ, ಈ ಇಡೀ ಜಗತ್ತಿನಲ್ಲಿ ನೀವು ಏಕಾಂಗಿಯಾಗಿರುತ್ತೀರಿ. ಮನುಷ್ಯ ಸಾಮಾಜಿಕ ಜೀವಿಯಾಗಿರುವುದರಿಂದ ಸಾಮಾಜಿಕ ಸಂವಹನಗಳು ಅನಿವಾರ್ಯ. ನಿಮ್ಮ ಸುತ್ತಲಿನ ಇತರ ಜನರನ್ನು ನೀವು ನಂಬದಿದ್ದರೆ, ನೀವು ಶಾಂತಿಯುತ ಜೀವನವನ್ನು ನಡೆಸಲು ಸಾಧ್ಯವಾಗದಿರಬಹುದು. ನೀವು ಏಕಾಂಗಿಯಾಗಿರಬೇಕಾಗಬಹುದು. ಯಾರೊಂದಿಗೂ ಬೆರೆಯಲು ಸಾಧ್ಯವಾಗುವುದಿರಬಹುದು. ಈ ಮಟ್ಟದ ಅಪನಂಬಿಕೆ ಇತರೆ ಅನೇಕ ಸಮಸ್ಯೆಗಳಿಗೂ ಕಾರಣವಾಗಬಹುದು.
 
ಒಬ್ಬ ವ್ಯಕ್ತಿಯು ಇತರರನ್ನು ನಂಬಲು ಸಾಧ್ಯವಾಗದಿದ್ದ ಪರಿಸ್ಥಿತಿಗೆ ಎರಡು ಪ್ರಮುಖ ಕಾರಣಗಳಿರಬಹುದು. ಆ ವ್ಯಕ್ತಿಯು ತನ್ನನ್ನು ತಾನೇ ತೀವ್ರವಾಗಿ ನಂಬುವವನಾಗಿರಬಹುದು ಅಥವಾ ವ್ಯಕ್ತಿಗೆ  ತನ್ನ ಮೇಲೆಯೇ ನಂಬಿಕೆ ಇಲ್ಲದಂತಹ ಪರಿಸ್ಥಿತಿ ಇರಬಹುದು.
 
ಕೆಲವು ಬಾಲ್ಯದ ಕಹಿ ಅನುಭವಗಳಿಂದಾಗಿಯೂ  ನಂಬಿಕೆ ಇಡುವಲ್ಲಿ ಸಮಸ್ಯೆಗಳು ಉದ್ಭವಿಸಬಹುದು. ಕೆಲವೊಮ್ಮೆ, ಜೀವನದ ಕೆಟ್ಟ ಅನುಭವಗಳಿಂದಾಗಿಯೂ  ಇರಬಹುದು.
 
ನಂಬುವಲ್ಲಿ ಸಮಸ್ಯೆಗಳು ಎಲ್ಲಿಂದ ಬರುತ್ತವೆ ಎಂದು ಅನ್ವೇಷಿಸುವು ವ್ಯಕ್ತಿಗೆ ತಮ್ಮ ಸಮಸ್ಯೆ ಎಲ್ಲಿಂದ  ಹುಡುಕುವುದು ಉಪಯುಕ್ತವಾಗುತ್ತದೆ. ಅದು ಸ್ಪಷ್ಟವಾದರೆ, ಅದನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ!
ಆದ್ದರಿಂದ, ಈ ಹುಡುಕಾಟ ಬಹುಶಃ ಪ್ರತಿಯೊಬ್ಬರಿಗೂ ಬಹಳ ಮುಖ್ಯವಾದದ್ದು. ಈ ಅನ್ವೇಷಣೆಯೇ ನಮ್ಮನ್ನು ಸಮಸ್ಯೆಯ ಮೂಲವನ್ನು ಹುಡುಕಲು ಸಹಾಯಕವಾಗುತ್ತದೆ.
 
Image by PDPics from Pixabay