ನಿದ್ರೆ ಮತ್ತು ಮಾನಸಿಕ ಆರೋಗ್ಯ

ನಿದ್ರೆ ಮತ್ತು ಮಾನಸಿಕ ಆರೋಗ್ಯ

Akshara Damle   ¦    Apr 04, 2021 03:09:17 PM (IST)
ನಿದ್ರೆ ಮತ್ತು ಮಾನಸಿಕ ಆರೋಗ್ಯ
"ಸರ್, ನಾನು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಬಯಸುತ್ತೇನೆ! ನನಗೆ ಆತಂಕವಿದೆ! ನಾನು ಕೆಲವೊಮ್ಮೆ ಖಾಲಿ ಅಂತ ಅನಿಸುತ್ತದೆ! ನಾನು ಒತ್ತಡಕ್ಕೊಳಗಾಗಿದ್ದೇನೆ! ಕೆಲವೊಮ್ಮೆ ಸ್ವಲ್ಪ ನಡುಕ ಉಂಟಾಗುತ್ತದೆ. ಆದರೆ ನಾನು ಕಷ್ಟಪಟ್ಟು ಅಧ್ಯಯನ ಮಾಡುತ್ತಿದ್ದೇನೆ! ನಾನು ನಿದ್ರೆಯನ್ನು ಮತ್ತಷ್ಟು ಕಡಿಮೆಗೊಳಿಸಿ ಹೆಚ್ಚು ಅಧ್ಯಯನ ಮಾಡುತ್ತಿದ್ದೇನೆ! ನಾನು ಹಗಲಿನಲ್ಲಿ  ಅಧ್ಯಯನಗಳನ್ನು  ಮಾಡುವುದಲ್ಲದೆ ರಾತ್ರಿಯಲ್ಲೂ ಕನಿಷ್ಠ 7 - 8 ಗಂಟೆಗಳ ಕಾಲ ಓದಲು ಕುಳಿತುಕೊಳ್ಳುತ್ತೇನೆ. ನಾನು ಅಗ್ರಸ್ಥಾನದಲ್ಲಿರಲು ಬಯಸುತ್ತೇನೆ"
 
ಸಮಾಲೋಚನೆಗಾಗಿ ಬಂದ ಕ್ಲೈಂಟ್ ಈ ಎಲ್ಲವನ್ನು ಹಂಚಿಕೊಳ್ಳುತ್ತಿದ್ದ ಮತ್ತು ನಾನು ಆತನ ಮಾತುಗಳನ್ನು ಬಹಳ ಗಮನವಿಟ್ಟು ಕೇಳುತ್ತಿದ್ದೆ! ನಾನು ಅವನಲ್ಲಿ ಬಹಳ ಬಲವಾದ ಆಕಾಂಕ್ಷೆಯನ್ನು ನೋಡಬಲ್ಲೆ! ಆದರೆ ಅದರ ಜೊತೆಗೆ ಅವನಲ್ಲಿದ್ದ ತಪ್ಪು ಕಲ್ಪನೆಗಳನ್ನೂ ಗಮನಿಸಿದೆ.
 
ಅವನಷ್ಟೇ ಅಲ್ಲ, ಎಷ್ಟೋ ವಿದ್ಯಾರ್ಥಿಗಳು ನಿದ್ರೆಯನ್ನು ಕಡಿಮೆ ಮಾಡುವ ಮೂಲಕ ಅಥವಾ ತ್ಯಾಗ ಮಾಡುವ ಮೂಲಕ ಹೆಚ್ಚು ಅಂಕಗಳನ್ನು ಗಳಿಸಬಹುದು ಎಂಬ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. ನಿದ್ರಿಸುವುದರಿಂದ  'ಸಮಯ ವ್ಯರ್ಥ' ಆಗುತ್ತದೆ ಎಂದು ಬಹಳಷ್ಟು ಜನರು ಭಾವಿಸುತ್ತಾರೆ; "ನೀವು ಎಷ್ಟು ಕಡಿಮೆ ನಿದ್ರೆ ಮಾಡುತ್ತೀರೋ ಅಷ್ಟು ಯಶಸ್ವಿಯಾಗುತ್ತೀರಿ"  ಎಂಬ ಭ್ರಮೆ ಅವರದಾಗಿರುತ್ತದೆ.
 
ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿದ್ರೆ ಒಂದು ಪ್ರಮುಖ ಅಂಶವಾಗಿದೆ ಎಂದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ನಿದ್ರೆಯ ಕಳಪೆ ಗುಣಮಟ್ಟವು ಕಿರಿಕಿರಿ, ಹತಾಶೆ, ಕೋಪ, ಏಕಾಗ್ರತೆಯ ಕೊರತೆ, ದುಃಖ, ಮನಸ್ಥಿತಿ ಬದಲಾವಣೆ, ಆತಂಕ, ದಣಿವು ಇತ್ಯಾದಿಗಳಿಗೆ ಕಾರಣವಾಗುತ್ತದೆ! ಇವೆಲ್ಲವೂ ದೀರ್ಘಕಾಲದವರೆಗೆ ಮುಂದುವರಿದರೆ, ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು!
 
ನಿದ್ರೆಯ ಮೂಲಕ, ನೀವು ನಿಮ್ಮನ್ನು ಚೈತನ್ಯಪೂರ್ಣರನ್ನಾಗಿಸಿಕೊಳ್ಳಬಹುದು.   ನಿಮ್ಮ ಕ್ಷಮತೆಯನ್ನು ಹೆಚ್ಚಿಸಲು ಇದು ನಿಮಗೆ ಸಹಾಯ ಮಾಡುತ್ತದೆ! ಅಂದಾಜಿಗೆ ಹೇಳುವುದಾದರೆ, ನಿದ್ರೆಯ ಅಭಾವ ಮತ್ತು ಹೊರೆಯೊಂದಿಗೆ 5 ಗಂಟೆಗಳ ಕಾಲ ಅಧ್ಯಯನ ಮಾಡುವುದು ಉತ್ತಮ ಗುಣಮಟ್ಟದ ನಿದ್ರೆಯ ನಂತರ ತಾಜಾ ಮನಸ್ಸಿನಿಂದ ಎರಡೂವರೆ ಗಂಟೆಗಳಿಂದ ಮೂರು ಗಂಟೆಗಳವರೆಗೆ ಪರಿಣಾಮಕಾರಿಯಾಗಿ ಅಧ್ಯಯನವನ್ನು ಮಾಡಿದ್ದಕ್ಕೆ ಸಮ ಎಂದು ಹೇಳಬಹುದು.
 
ನೀವು ಈಗಾಗಲೇ ಗಮನಿಸಿದಂತೆ, ನಿದ್ರೆಯ ಗುಣಮಟ್ಟಕ್ಕೆ ಹೆಚ್ಚು ಒತ್ತು ಕೊಡಬೇಕೇ ಹೊರತು ಪ್ರಮಾಣಕ್ಕೆ ಅಲ್ಲ! ಆರೋಗ್ಯವಾಗಿರಲು 8 ಗಂಟೆಗಳ ಕಾಲ ಮಲಗಬೇಕು ಎಂಬ ಗ್ರಹಿಕೆ ಜನರಿಗೆ ಇದೆ! ಆದರೆ ನನ್ನ ಅನುಭವದಲ್ಲಿ, ಇದು ವೈಯಕ್ತಿಕವಾಗಿ ನಿರ್ಧರಿಸುವ ವಿಷಯವಾಗಿದೆ! ಕೆಲವರಿಗೆ 5 ಗಂಟೆಗಳ ನಿದ್ರೆ  ಸಾಕಾಗುತ್ತದೆ, ಇನ್ನು ಕೆಲವರಿಗೆ 7 ಗಂಟೆಗಳು ಬೇಕಾಗಬಹುದು! ಇನ್ನು ಕೆಲವರಿಗೆ ಕೇವಲ 3 ಗಂಟೆಗಳ ನಿದ್ರೆಯಷ್ಟೇ ಧಾರಾಳವಾಗಿ ಸಾಕಾಗುತ್ತದೆ. ಆದರೆ, ಹೆಚ್ಚು ಸಮಯ ನಿದ್ದೆ ಮಾಡುವುದು ಸಹ ಒಳ್ಳೆಯದಲ್ಲ. ಇದು ನಿಮ್ಮನ್ನು ಹೆಚ್ಚು ಆಲಸಿಗಳನ್ನಾಗಿ ಮಾಡುತ್ತದೆ ಮತ್ತು ಅದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇತರ ಸಮಸ್ಯೆಗಳನ್ನು ಸಹ ಸೃಷ್ಟಿಸುತ್ತದೆ.
 
ಆದ್ದರಿಂದ, ನಿಮ್ಮ ನಿದ್ರೆಯ ಗುಣಮಟ್ಟವು ಉತ್ತಮವಾಗಿದ್ದಷ್ಟು ನಿಮ್ಮ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ.