ಜೀವನದಲ್ಲಿ ಗೊಂದಲಗಳು ಒಳ್ಳೆಯವೇ! ಅವುಗಳ ಮೂಲಕ ನಿಮ್ಮನ್ನು ನೀವು ಅನ್ವೇಷಿಸಿಕೊಳ್ಳಬಹುದು

ಜೀವನದಲ್ಲಿ ಗೊಂದಲಗಳು ಒಳ್ಳೆಯವೇ! ಅವುಗಳ ಮೂಲಕ ನಿಮ್ಮನ್ನು ನೀವು ಅನ್ವೇಷಿಸಿಕೊಳ್ಳಬಹುದು

Akshara Damle   ¦    Jan 24, 2021 09:28:49 AM (IST)
ಜೀವನದಲ್ಲಿ ಗೊಂದಲಗಳು ಒಳ್ಳೆಯವೇ! ಅವುಗಳ ಮೂಲಕ ನಿಮ್ಮನ್ನು ನೀವು ಅನ್ವೇಷಿಸಿಕೊಳ್ಳಬಹುದು

ಗೊಂದಲವು ವ್ಯಕ್ತಿಯು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ಅಸ್ಪಷ್ಟವಾಗಿರುವ ಸ್ಥಿತಿಯಾಗಿದೆ. ತನ್ನ ಬಗ್ಗೆಯೇ ಪ್ರಶ್ನೆಗಳು ಇರಬಹುದು; ಒಬ್ಬರ ನಿರ್ಧಾರಗಳ ಬಗ್ಗೆ ಪ್ರಶ್ನೆಗಳಿರಬಹುದು; ಒಬ್ಬರ ಆಯ್ಕೆಗಳ ಬಗ್ಗೆ ಪ್ರಶ್ನೆಗಳು ಇರಬಹುದು.

ನಮ್ಮಲ್ಲಿ ಹೆಚ್ಚಿನವರಿಗೆ ಗೊಂದಲಗಳು ಬೇರೆ ಬೇರೆ ಸಮಯ ಸಂದರ್ಭಗಳಲ್ಲಿ ಬರುತ್ತವೆ. ವ್ಯಕ್ತಿಗೆ ಅನೇಕ ಆಯ್ಕೆಗಳು ಲಭ್ಯವಿದ್ದಾಗ ಮತ್ತು ಅಂತಹ ಸನ್ನಿವೇಶದಲ್ಲಿ ವ್ಯಕ್ತಿಯು ತನಗೆ ಯಾವುದು ಸೂಕ್ತವೆಂದು ಕಂಡುಹಿಡಿಯುವ ಸ್ಥಿತಿಯಲ್ಲಿಲ್ಲದಾಗ ಗೊಂದಲದ ಪರಿಸ್ಥಿತಿ ಸೃಷ್ಠಿಯಾಗುತ್ತದೆ. ಆದ್ದರಿಂದ ಮೊದಲಿಗೆ ಗೊಂದಲಗಳು ಎಲ್ಲಿಂದ ಬರುತ್ತಿವೇ ಎಂದು ಕಂಡುಹಿಡಿಯುವುದು ಬಹಳ ಮುಖ್ಯ.

ವ್ಯಕ್ತಿಯು ಒಂದನ್ನು ಆಯ್ಕೆ ಮಾಡಲು ಇನ್ನೊಂದನ್ನು ಬಿಟ್ಟುಕೊಡಲು ಸಿದ್ಧರಿಲ್ಲದ ಕಾರಣ ಅಥವಾ ವ್ಯಕ್ತಿಯು ಎರಡನ್ನೂ ಬಯಸದಿದ್ದರೂ ಸಹ, ಒಂದನ್ನು ಆಯ್ಕೆ ಮಾಡಲು ಬಲವಂತವಾಗಿರುವುದರಿಂದ, ಹೀಗೆ ವಿವಿಧ ಕಾರಣಗಳಿಂದ ಗೊಂದಲಗಳು ಉಂಟಾಗಬಹುದು.

ಅಂತಹ ಸಂದರ್ಭಗಳಲ್ಲಿ ಆ ವ್ಯಕ್ತಿ ಮಾನಸಿಕವಾಗಿ ಸದೃಢರಾಗಿಲ್ಲ ಅಥವಾ ಏನು ಮಾಡಬೇಕೆಂದು ತಿಳಿಯದ ವ್ಯಕ್ತಿ ಎಂದು ಪರಿಗಣಿಸುತ್ತಾರೆ. ಇದರಿಂದಾಗಿ ಅವರು ತಮ್ಮ ಮೇಲೆ ಎಲ್ಲಾ ಹೊರೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ ಮತ್ತು ತಮ್ಮನ್ನು ಗೊಂದಲಮಯ ವ್ಯಕ್ತಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತಾರೆ!

ಆದರೆ, ಗೊಂದಲವನ್ನು ನಾವು ಬೇರೆ ರೀತಿಯಲ್ಲಿ ನೋಡಬಹುದೇ?

ವ್ಯಕ್ತಿಯು ಗೊಂದಲಕ್ಕೊಳಗಾಗಿದ್ದರೆ ಆವಾಗ ಆತ ಅಥವಾ ಆಕೆ ತಮ್ಮ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ. ವ್ಯಕ್ತಿಯು ಅವರ ಆಯ್ಕೆಗಳ ಬಗ್ಗೆ ಪ್ರಶ್ನೆಗಳನ್ನು ಹೊಂದಿದ್ದರೆ, ಆವಾಗ ತನಗೆ ಯಾವುದು ಉತ್ತಮ ಎಂದು ಯೋಚಿಸಲು ಪ್ರಾರಂಭಿಸುತ್ತಾರೆ. ಒಬ್ಬ ವ್ಯಕ್ತಿಯು ತನ್ನನ್ನು ತಾನೇ ಅನ್ವೇಷಿಸಲು ಪ್ರಾರಂಭಿಸುವುದೇ ಖಚಿತತೆ ಇಲ್ಲದಿದ್ದಾಗ.

ಅಂತಹ ಪರಿಶೋಧನೆಯ ಪ್ರಕ್ರಿಯೆಯು ಹೊಸ ತಿಳುವಳಿಕೆಗಳು ಮತ್ತು ಹೊಸ ಕಾಣ್ಕೆಗಳಿಗೆ ಕಾರಣವಾಗಬಹುದು. ಅದು ತನ್ನ ಬಗ್ಗೆ ಹೊಸ ಜಾಗೃತಿಯನ್ನು ತರುತ್ತದೆ. ಅದಕ್ಕಾಗಿಯೇ ನೀವು ಗೊಂದಲಮಯ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರೆ, ಅದು ಸರಿಯಾದ ಹಾದಿಯನ್ನು ಹಿಡಿಯುವ ಕಡೆಗೆ ಸಾಗಲು ಮತ್ತು ವ್ಯಕ್ತಿತ್ವದ ವಿಕಸನವಾಗಲು ಒಂದು ಉತ್ತಮ ಅವಕಾಶವಾಗಿರುತ್ತದೆ.