ಡಿಕೆಶಿ, ಸಿದ್ದರಾಮಯ್ಯಗೆ ಬಿಜೆಪಿಯಿಂದ ನೋಟಿಸ್

ಡಿಕೆಶಿ, ಸಿದ್ದರಾಮಯ್ಯಗೆ ಬಿಜೆಪಿಯಿಂದ ನೋಟಿಸ್

HSA   ¦    Jul 31, 2020 02:47:56 PM (IST)
ಡಿಕೆಶಿ, ಸಿದ್ದರಾಮಯ್ಯಗೆ ಬಿಜೆಪಿಯಿಂದ ನೋಟಿಸ್

ಬೆಂಗಳೂರು: ಸರ್ಕಾರದ ವಿರುದ್ಧ ಸುಳ್ಳು ಭ್ರಷ್ಟಾಚಾರದ ಆರೋಪಗಳನ್ನು ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ನೋಟಿಸ್ ಜಾರಿ ಮಾಡಿದೆ.

ಬಿಜೆಪಿ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ಈ ನೋಟಿಸ್ ಜಾರಿ ಮಾಡಿದ್ದು, 15 ದಿನಗಳ ಒಳಗಡೆ ಇದಕ್ಕೆ ಉತ್ತರಿಸುವಂತೆ ಹೇಳಿರುವರು.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 2 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಆರೋಪ ಮಾಡಿದ್ದರು.