ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಗೆ ಕೋವಿಡ್‌ ದೃಢ

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಗೆ ಕೋವಿಡ್‌ ದೃಢ

Y.K   ¦    Nov 20, 2020 12:24:52 AM (IST)
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಗೆ ಕೋವಿಡ್‌ ದೃಢ

ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಕೊರೊನಾ ವೈರಸ್‌‌ ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಅವರೇ ಟ್ವೀಟ್‌ ಮಾಡಿದ್ದು, ಆರಂಭಿಕ ಲಕ್ಷಣಗಳ ಹಿನ್ನೆಲೆ ಕೊರೊನಾ ಟೆಸ್ಟ್‌ ಮಾಡಿಸಿದಾಗ ವರದಿ ಪಾಸಿಟಿವ್‌ ಬಂದಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಕೊರೊನಾ ವೈರಸ್‌ನ ಪ್ರಾರಂಭಿಕ ಲಕ್ಷಣ ಹಿನ್ನೆಲೆ ಕೋವಿಡ್‌ ಟೆಸ್ಟ್‌ ಮಾಡಿಸಬೇಕಾಯಿತು. ಆಗ ವರದಿ ಪಾಸಿಟಿವ್‌ ಬಂದಿದೆ. ಸದ್ಯ ಸ್ವಯಂ ಕ್ವಾರಂಟೈನ್‌ನಲ್ಲಿದ್ದೇನೆ. ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಸುರಕ್ಷಿತವಾಗಿರಿ ಹಾಗೂ ನಿಯಮದಂತೆ ಕೊರೊನಾ ಪರೀಕ್ಷೆ ಮಾಡಿಸಿ ಎಂದು ತಿಳಿಸಿದ್ದಾರೆ.