ಬಜೆಟ್ ಅಧಿವೇಶನ ವೇಳೆ ನ್ಯೂಸ್ ಚಾನೆಲ್ ಗಳಿಗೆ ನಿರ್ಬಂಧ

ಬಜೆಟ್ ಅಧಿವೇಶನ ವೇಳೆ ನ್ಯೂಸ್ ಚಾನೆಲ್ ಗಳಿಗೆ ನಿರ್ಬಂಧ

HSA   ¦    Feb 14, 2020 02:21:15 PM (IST)
ಬಜೆಟ್ ಅಧಿವೇಶನ ವೇಳೆ ನ್ಯೂಸ್ ಚಾನೆಲ್ ಗಳಿಗೆ ನಿರ್ಬಂಧ

ಬೆಂಗಳೂರು: ರಾಜ್ಯ ಬಜೆಟ್ ಮಾರ್ಚ್ 5ರಂದು ಮಂಡನೆಯಾಗಲಿದ್ದು, ಚಾನೆಲ್ ಗಳ ಕ್ಯಾಮರಾಗಳಿಗೆ ವಿಧಾನಸಭೆಯ ಒಳಗೆ ಪ್ರವೇಶವಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಕೂಡ ಲೋಕಸಭೆ ಹಾಗೂ ರಾಜ್ಯಸಭೆ ಮಾದರಿ ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.

ಮಾರ್ಚ್ 5ರಂದು ಬಜೆಟ್ ಮಂಡನೆಯಾಗುವುದು. ಇದಕ್ಕೆ ಮೊದಲು ಫೆ.17ರಿಂದ ವಿಧಾನಮಂಡಲದ ಅಧಿವೇಶನ ನಡೆಯಲಿದೆ. ಇದರಲ್ಲಿ ಎಲ್ಲಾ ಸದಸ್ಯರು ಪಾಲ್ಗೊಳ್ಳಬೇಕು ಎಂದರು.