ಖಾಸಗಿ ಬಸ್ ಬಂದ್: ಕೇರಳಕ್ಕೆ ಹೆಚ್ಚುವರಿ ಕೆಎಸ್ ಆರ್ ಟಿಸಿ ಬಸ್ ಸೇವೆ

ಖಾಸಗಿ ಬಸ್ ಬಂದ್: ಕೇರಳಕ್ಕೆ ಹೆಚ್ಚುವರಿ ಕೆಎಸ್ ಆರ್ ಟಿಸಿ ಬಸ್ ಸೇವೆ

YK   ¦    Jun 25, 2019 03:00:16 PM (IST)
ಖಾಸಗಿ ಬಸ್ ಬಂದ್: ಕೇರಳಕ್ಕೆ ಹೆಚ್ಚುವರಿ ಕೆಎಸ್ ಆರ್ ಟಿಸಿ ಬಸ್ ಸೇವೆ

ಬೆಂಗಳೂರು: ಕೇರಳಕ್ಕೆ ತೆರಳುವ ಖಾಸಗಿ ಬಸ್ ಗಳು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಕೆಎಸ್ ಆರ್ ಟಿಸಿ ಹೆಚ್ಚುವರಿ ಬಸ್ ಗಳ ಸೇವೆಯನ್ನು ಕರ್ನಾಟಕದಿಂದ ಕೇರಳಕ್ಕೆ ಒದಗಿಸಿದೆ.

ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಕೆಎಸ್ ಆರ್ ಟಿಸಿ ಈ ಕ್ರಮವನ್ನು ಕೈಗೊಂಡಿದೆ. ಹೆಚ್ಚಿನ ಬಸ್ ಬೆಂಗಳೂರು, ಮಂಗಳೂರು ಹಾಗೂ ಮಣಿಪಾಲ ವಾಗಿ ಕೇರಳಕ್ಕೆ ಹೋಗಲಿದೆ.

ಕಲ್ಲಡ್ಕ ಬಸ್ ದುರಂತ ಹಿನ್ನೆಲೆ ಮೋಟಾರು ವಾಹನ ಇಲಾಖೆಯ ಕಿರುಕುಳ ಸಹಿಸದೆ ಅಂತರ ರಾಜ್ಯ ಬಸ್ ಮಾಲೀಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸುತ್ತಿರುವುದುರಿಂದ ಕೇರಳಕ್ಕೆ ಖಾಸಗಿ ಬಸ್ ಸಂಚಾರ ಮಂಗಳವಾರ ಸ್ಥಗಿತಗೊಂಡಿದೆ.