ಪ್ರಕರಣ ಹೆಚ್ಚುತ್ತಲಿದ್ದರು ಕ್ವಾರೆಂಟೈನ್ ಅವಧಿ ಕಡಿತ!

ಪ್ರಕರಣ ಹೆಚ್ಚುತ್ತಲಿದ್ದರು ಕ್ವಾರೆಂಟೈನ್ ಅವಧಿ ಕಡಿತ!

HSA   ¦    May 23, 2020 02:16:38 PM (IST)
ಪ್ರಕರಣ ಹೆಚ್ಚುತ್ತಲಿದ್ದರು ಕ್ವಾರೆಂಟೈನ್ ಅವಧಿ ಕಡಿತ!

ಬೆಂಗಳೂರು: ದಿನೇ ದಿನೇ ಕೊವಿಡ್-19 ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಲಿದ್ದರೂ ರಾಜ್ಯ ಸರ್ಕಾರವು ತೆಗೆದುಕೊಳ್ಳುತ್ತಿರುವ ಕೆಲವು ನಿರ್ಧಾರಗಳು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ರಾಜ್ಯ ಸರ್ಕಾರದ ಹೊಸ ಆದೇಶದ ಪ್ರಕಾರ ಕ್ವಾರೆಂಟೈನ್ ಅವಧಿಯನ್ನು ಕೂಡ ಕಡಿಮೆ ಮಾಡಲಾಗಿದೆ.

ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ, ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದ ಬರುವಂತಹ ಜನರನ್ನು ಕೇವಲ ಏಳು ದಿನಗಳ ಕಾಲ ಕ್ವಾರೆಂಟೈನ್ ಮಾಡಲಾಗುತ್ತದೆ. ಮುಂದಿನ ಏಳು ದಿನಗಳ ಕಾಲ ಅವರು ಮನೆಯಲ್ಲೇ ಕ್ವಾರೆಂಟೈನ್ ಆಗಿರಬೇಕು. 5 ಮತ್ತು ಏಳನೇ ದಿನದಂದು ಪರೀಕ್ಷೆ ಮಾಡಲಾಗುತ್ತದೆ ಎಂದು ಹೊಸ ನಿಯಮ ತಂದಿದೆ.

ಈ ಆರು ರಾಜ್ಯಗಳನ್ನು ಹೊರತುಪಡಿಸಿ, ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವಂತವರಿಗೆ 14 ದಿನಗಳ ಕಾಲ ಹೋಮ್ ಕ್ವಾರೆಂಟೈನ್ ಗೆ ಸರ್ಕಾರ ಸೂಚಿಸಿದೆ.

ಗರ್ಭಿಣಿಯರು, ಮಕ್ಕಳು ಮತ್ತು 80ರ ಹರೆಯಕ್ಕಿಂತ ಮೇಲ್ಪಟ್ಟವರು ಮನೆಯಲ್ಲೇ ಕ್ವಾರೆಂಟೈನ್ ಆಗಿರಬೇಕು.