ದಾಖಲಾತಿ ಶೂನ್ಯವಾದರೆ ವರ್ಗಾವಣೆ ಶಿಕ್ಷೆ

ದಾಖಲಾತಿ ಶೂನ್ಯವಾದರೆ ವರ್ಗಾವಣೆ ಶಿಕ್ಷೆ

HSA   ¦    May 14, 2019 10:39:43 AM (IST)
ದಾಖಲಾತಿ ಶೂನ್ಯವಾದರೆ ವರ್ಗಾವಣೆ ಶಿಕ್ಷೆ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯು ಶೂನ್ಯವಾದರೆ ಆ ಶಾಲೆ ಯಾ ಕಾಲೇಜಿನ ಶಿಕ್ಷಕ, ಉಪನ್ಯಾಸಕರು ಶೈಕ್ಷಣಿಕ ವರ್ಷದಲ್ಲಿ ವರ್ಗಾವಣೆ ಶಿಕ್ಷೆಗೆ ಗುರಿಯಾಗುವರು.

ಈಗ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಅಭಿಯಾನವು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಕನಿಷ್ಠ ದಾಖಲಾತಿ ಸಾಧಿಸಲು ಸಾಧ್ಯವಾಗದೆ ಇದ್ದರೆ ಅಂತಹ ಶಾಲಾ, ಕಾಲೇಜಿನ ಶಿಕ್ಷಕ, ಉಪನ್ಯಾಸಕರು ಸರ್ಕಾರದ ಕೆಂಗಣ್ಣಿಗೆ ಗುರಿಯಗುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ.

ಶಿಕ್ಷಕರು ಹಾಗೂ ಉಪನ್ಯಾಸಕರ ವಿವರ ಆನ್ ಲೈನ್ ಮೂಲಕ ಪಡೆಯಲಾಗುತ್ತಿದೆ. ದಾಖಲಾತಿ ಶೂನ್ಯವಾದರೆ ಅಂತಹವರನ್ನು ಬೇರೆಡೆಗೆ ವರ್ಗಾಯಿಸಲಾಗುವುದು. ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ಜಿಲ್ಲಾ ಉಪನಿರ್ದೇಶಕರು ಇಂತವರಿಗೆ ಶ್ರೀರಕ್ಷೆಯಾಗಿ ನಿಲ್ಲುತ್ತಿದ್ದರು. ಆದರೆ ಇನ್ನು ಇದು ಅಸಾಧ್ಯ ಎಂದು ಮೂಲಗಳು ತಿಳಿಸಿವೆ.