ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ: ಗೋವಾದಲ್ಲಿ ಸಿಸಿಬಿ ತನಿಖೆ

ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ: ಗೋವಾದಲ್ಲಿ ಸಿಸಿಬಿ ತನಿಖೆ

HSA   ¦    Sep 16, 2020 10:49:28 AM (IST)
ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ: ಗೋವಾದಲ್ಲಿ ಸಿಸಿಬಿ ತನಿಖೆ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದ ಬಗ್ಗೆ ತನಿಖೆ ನಡೆಸಲು ಸಿಸಿಬಿ ತಂಡವು ಗೋವಾಕ್ಕೆ ತೆರಳಿದ್ದು, ಇಲ್ಲಿನ ಕೆಸಿನೋಗೆ ಭೇಟಿ ನೀಡಿ ತನಿಖೆ ಆರಂಭಿಸಿದೆ.

ಸ್ಯಾಂಡಲ್ ವುಡ್ ನಲ್ಲಿ ರಾಗಿಣಿ ದ್ವಿವೇದಿ ಮತ್ತು ಕಾಂಗ್ರೆಸ್ ನಾಯಕರೊಬ್ಬರ ಡ್ರಗ್ಸ್ ಮಾಫಿಯಾದಲ್ಲಿ ಪಾತ್ರವೇನು ಎಂದು ತಿಳಿಯಲು ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಬಂಧನದಲ್ಲಿರುವ ನಟಿ ರಾಗಿಣಿ ವಾಟ್ಸಪ್ ನಂಬರನ್ನು ಸಿಸಿಬಿ ಜಾಲಾಡುತ್ತಿದ್ದು, ಇದರಲ್ಲಿ ಇರುವಂತಹ ಕೆಲವೊಂದು ನಂಬರ್ ಗಳನ್ನು ತಪಾಸಣೆ ಮಾಡುತ್ತಿದೆ.

ನಗರದಲ್ಲಿ ಇರುವ ರಾಗಿಣಿಯ ಕೆಲವೊಂದು ಆಸ್ತಿಗಳ ಬಗ್ಗೆ ಕೂಡ ಸಿಸಿಬಿ ತನಿಖೆ ನಡೆಸುತ್ತಿದೆ. ಈಗಾಗಲೇ ರಾಗಿಣಿ ಮನೆಯವರು ಒಂದು ಅಪಾರ್ಟ್ ಮೆಂಟ್ ನ್ನು ಮಾರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.