ರಾಜ್ಯದಲ್ಲಿ ಬುಧವಾರ 63 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆ

ರಾಜ್ಯದಲ್ಲಿ ಬುಧವಾರ 63 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆ

HSA   ¦    May 20, 2020 02:46:11 PM (IST)
ರಾಜ್ಯದಲ್ಲಿ ಬುಧವಾರ 63 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮಹಾಮಾರಿಯು ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುವನ್ನು ಚಾಚುತ್ತಲೇ ಇದ್ದು, ಬುಧವಾರ ಒಟ್ಟು 63 ಹೊಸ ಪ್ರಕರಣಗಳು ದಾಖಲಾಗಿದೆ.

ಇದರಿಂದಾಗಿ ಸೋಂಕಿತರ ಸಂಖ್ಯೆಯು 1458ಕ್ಕೆ ಏರಿಕೆ ಆಗಿದೆ. ಇದುವರೆಗೆ ಕೊವಿಡ್-19ನಿಂದಾಗಿ 40 ಮಂದಿ ಮೃತಪಟ್ಟಿದ್ದು, 553 ಮಂದಿ ಗುಣಮುಖರಾಗಿರುವರು.

ಇಂದು ಬೆಂಗಳೂರು ನಗರದಲ್ಲಿ 4, ಮಂಡ್ಯದಲ್ಲಿ 8, ಕಲುಬುರಗಿ 7, ಬೀದರ್-10, ಉತ್ತರ ಕನ್ನಡ-1, ದಕ್ಷಿಣ ಕನ್ನಡ-1, ಹಾಸನ-21, ಉಡುಪಿ-6, ತುಮಕೂರು-4 ಮತ್ತು ಯಾದಗಿರಿ-1 ಕೊರೋನಾ ಸೋಂಕು ವರದಿಯಾಗಿದೆ.