ಬಿಯರ್ ಬಾಟಲ್ ಒಳಗೆ ಸಿಲುಕಿ ನಾಗರಹಾವು ಸಾವು

ಬಿಯರ್ ಬಾಟಲ್ ಒಳಗೆ ಸಿಲುಕಿ ನಾಗರಹಾವು ಸಾವು

YK   ¦    Oct 06, 2019 04:01:51 PM (IST)
ಬಿಯರ್ ಬಾಟಲ್ ಒಳಗೆ ಸಿಲುಕಿ ನಾಗರಹಾವು ಸಾವು

ಬೆಂಗಳೂರು: ಬಿಯರ್ ಬಾಟಲ್ ಒಳಗೆ ಹೋದ ನಾಗರಹಾವು ಹೊರಬರಲಾಗದೆ ಸಾವನ್ನಪ್ಪಿದ ಹೃದಯವಿದ್ರಾಹಕ ಘಟನೆ ಚಿತ್ರದುರ್ಗಾ ಜಿಲ್ಲೆಯ ದೇವಪುರ ಹಳ್ಳಿಯಲ್ಲಿ ನಡೆದಿದೆ.

ರಸ್ತೆಯಲ್ಲಿ ಬಿಸಾಕಿದ್ದ ಬಿಯರ್ ಬಾಟಲ್ ಒಳಗೆ ಸಿಲುಕಿಕೊಂಡಿದ್ದ ಹಾವು ಹೊರಬರಲು ಸತತ ಪ್ರಯತ್ನ ನಡೆಸಿದರೂ ಗಂಭೀರ ಗಾಯದಿಂದ ಸಾವನಪ್ಪಿದೆ.

ಸ್ಥಳೀಯರ ಪ್ರಕಾರ, ದೇವಪುರ ಪ್ರವಾಸಿ ತಾಣವಾಗಿದ್ದು ಪ್ರತಿನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬಂದವರು ಪ್ಲಾಸ್ಟಿಕ್ ಹಾಗೂ ಬಾಟಲ್ ಗಳನ್ನು ಅಲ್ಲೇ ಬಿಸಾಕಿಹೋಗುತ್ತಾರೆ.  ಭಾನುವಾರ ಹೀಗೇ ಬಿಸಾಕಿದ್ದ ಬಿಯರ್ ಬಾಟಲ್ ಒಳಗೆ ಹೋದ ಹಾವು ಹೊರ ಬರಲಾಗದೆ ರಸ್ತೆ ಮಧ್ಯದಲ್ಲಿ ಸಾವನ್ನಪ್ಪಿದೆ.  ಸ್ಥಳೀಯ ಅರಣ್ಯ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.