ನಾಳೆಯಿಂದ ಮೂರು ದಿನಗಳ ಕಾಲ ವಿಧಾನಸಭೆ ಕಲಾಪ

ನಾಳೆಯಿಂದ ಮೂರು ದಿನಗಳ ಕಾಲ ವಿಧಾನಸಭೆ ಕಲಾಪ

HSA   ¦    Oct 09, 2019 11:35:49 AM (IST)
ನಾಳೆಯಿಂದ ಮೂರು ದಿನಗಳ ಕಾಲ ವಿಧಾನಸಭೆ ಕಲಾಪ

ಬೆಂಗಳೂರು: ಮೂರು ದಿನಗಳ ಕಾಲ ನಡೆಯುವ ವಿಧಾನಸಭೆ ಅಧಿವೇಶನವು ನಾಳೆಯಿಂದ ಆರಂಭವಾಗಲಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಆಡಳಿತ ಪಕ್ಷದ ನಾಯಕನಾಗಿ ವಿಧಾನಸಭೆಗೆ ನೇಮಕ ಮಾಡಿದ್ದಾರೆ.

ಪ್ರತಿಪಕ್ಷಗಳು ವಿಧಾನಸಭೆ ಕಲಾಪದ ವೇಳೆ ನೆರೆ ಪರಿಹಾರ ಬಿಡುಗಡೆ ವಿಳಂಬ ಮತ್ತು ರೈತರ ಆತ್ಮಹತ್ಯೆಯನ್ನು ಪ್ರಮುಖ ವಿಚಾರವನ್ನಾಗಿಸಲಿದೆ.

ಆಂತರಿಕ ಪರಿಹಾರವನ್ನು ಕೇಂದ್ರ ಸರ್ಕಾರವು ಹೆಚ್ಚಿಸಿದೆ ಮತ್ತು ವಿಪಕ್ಷವನ್ನು ಸರಿಯಾದ ರೀತಿಯಲ್ಲಿ ಎದುರಿಸಲು ಸರ್ಕಾರವು ತಯಾರಾಗಿದೆ ಎಂದು ಬಿಜೆಪಿ ಹಿರಿಯ ನಾಯಕರು ಹೇಳಿದ್ದಾರೆ.