ಬೆಂಗಳೂರಿನಲ್ಲಿ ಆರಂಭವಾಗಲಿದೆ ಸಂಪೂರ್ಣ ಲೇಡಿಸ್ ಸ್ಪೆಷಲ್ ಬಾರ್!

ಬೆಂಗಳೂರಿನಲ್ಲಿ ಆರಂಭವಾಗಲಿದೆ ಸಂಪೂರ್ಣ ಲೇಡಿಸ್ ಸ್ಪೆಷಲ್ ಬಾರ್!

HSA   ¦    Feb 14, 2020 03:26:48 PM (IST)
ಬೆಂಗಳೂರಿನಲ್ಲಿ ಆರಂಭವಾಗಲಿದೆ ಸಂಪೂರ್ಣ ಲೇಡಿಸ್ ಸ್ಪೆಷಲ್ ಬಾರ್!

ಬೆಂಗಳೂರು: ಮಹಿಳೆಯರಿಂದ, ಮಹಿಳೆಯರಿಗಾಗಿ, ಮಹಿಳೆಗೋಸ್ಕರ ಎನ್ನುವ ಧ್ಯೇಯವನ್ನು ಇಟ್ಟುಕೊಂಡು ಬೆಂಗಳೂರಿನಲ್ಲಿ ರಾಷ್ಟ್ರದಲ್ಲೇ ಮೊದಲ ಬಾರಿಗೆ ಮಹಿಳಾ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾರ್ಚ್ 8ರಂದು ಆರಂಭವಾಗಲಿದೆ.

ಇಲ್ಲಿ ಮಾಲಕಿಯಿಂದ ಹಿಡಿದು ಸಿಬ್ಬಂದಿ ತನಕ ಪ್ರತಿಯೊಬ್ಬರು ಮಹಿಳೆಯರೇ ಆಗಿರುವರು. ಈ ವಿನೂತನ ಬಾರ್ ನಗರದ ಬ್ರಿಗೇಡ್ ರಸ್ತೆಯಲ್ಲಿ ತೆರೆಯಲಿದ್ದು, ಇದಕ್ಕೆ ಮಿಸ್ ಆ್ಯಂಡ್ ಮಿಸೆಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಆ್ಯಂಡ್ ಲಾಂಜ್ ಎಂದು ಹೆಸರಿಡಲಾಗಿದೆ. ಸುಮಾರು 2500 ಅಡಿ ವಿಸ್ತೀರ್ಣದಲ್ಲಿ ಈ ಬಾರ್ ಕಾರ್ಯನಿರ್ವಹಿಸಲಿದೆ.

ಈ ಬಾರ್ ನಲ್ಲಿ ಬೌನ್ಸರ್ ಕೂಡ ಮಹಿಳೆಯರೇ ಆಗಿರುವರು. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 1 ಗಂಟೆ ತನಕ ಇದು ತೆರೆದಿರುವುದು. ಮಹಿಳೆಯರನ್ನೇ ಒಳಗೊಂಡ ಕ್ಯಾಬ್ ಸೇವೆ ಕೂಡ ಗ್ರಾಹಕರಿಗೆ ಹಾಗೂ ಸಿಬ್ಬಂದಿಗೆ ಸಿಗಲಿದೆ.

ಬಾರ್ ನ ಮಾಲಕಿ ಪಂಜುರಿ ವಿ ಶಂಕರ್ ಅವರ ಪ್ರಕಾರ, ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಮುಂದೆ ನಗರದಲ್ಲಿ ಇಂತಹ ಬಾರ್ ಗಳನ್ನು ಇನ್ನಷ್ಟು ತೆರೆಯಲಾಗುವುದು ಎಂದರು.