ಮಾ.4ರಿಂದ ವಿಧಾನಸಭೆಯಲ್ಲಿ ಬಜೆಟ್ ಅಧಿಕವೇಶನ ಆರಂಭ

ಮಾ.4ರಿಂದ ವಿಧಾನಸಭೆಯಲ್ಲಿ ಬಜೆಟ್ ಅಧಿಕವೇಶನ ಆರಂಭ

HSA   ¦    Feb 23, 2021 10:34:33 AM (IST)
ಮಾ.4ರಿಂದ ವಿಧಾನಸಭೆಯಲ್ಲಿ ಬಜೆಟ್ ಅಧಿಕವೇಶನ ಆರಂಭ

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನವು ಮಾರ್ಚ್ 4ರಿಂದ ಆರಂಭವಾಗಲಿದ್ದು, ಇದು ಮಾ.31ರ ತನಕ ಮುಂದುವರಿಯಲಿದೆ.

ಮಾರ್ಚ್ 8ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್ ಮಂಡಿಸಲಿರುವರು. ಈ ಬಗ್ಗೆ ಶಾಸಕಾಂಗದ ಕಾರ್ಯದರ್ಶಿ ಎಂ.ಕೆ. ವಿಜಯಲಕ್ಷ್ಮೀ ಅವರು ಅಧಿಸೂಚನೆ ಜಾರಿ ಮಾಡಿರುವರು.

ಮಾ.4 ಮತ್ತು 5ರಂದು ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ವಿಶೇಷ ಚರ್ಚೆಯು ನಡೆಯಲಿದೆ. ಇದು ಈ ಬಜೆಟ್ ಅಧಿವೇಶನದ ಆಕರ್ಷಣೆಯಾಗಿರಲಿದೆ.