ಅಪಘಾತದಲ್ಲಿ ಬಿಸಿಲೆ ಚಿತ್ರದ ನಿರ್ದೇಶಕ ಸಾವು

ಅಪಘಾತದಲ್ಲಿ ಬಿಸಿಲೆ ಚಿತ್ರದ ನಿರ್ದೇಶಕ ಸಾವು

Jan 11, 2016 11:53:31 AM (IST)

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಅಪಘಾತದಲ್ಲಿ ಬಿಸಿಲೆ ಚಿತ್ರದ ನಿರ್ದೇಶಕ ಸಾವನ್ನಪ್ಪಿದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.

ಬಿಸಿಲೆ ಚಿತ್ರದ ನಿರ್ದೇಶಕ ಸಂದೀಪ್(38) ಮೃತಪಟ್ಟವರು. ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ರಸ್ತೆ ಮುಖಾಂತರವಾಗಿ ತೆರಳುತ್ತಿದ್ದ ಸಂದೀಪ್ ಅವರು ಆಯತಪ್ಪಿ ಕೆಳಗೆ ಬಿದ್ದು ದುರ್ಮರಣಕ್ಕೀಡಾಗಿದ್ದಾರೆ. ಸಂದೀಪ್ ತೆರಳುತ್ತಿದ್ದ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದು, ಸಂದೀಪ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಬೇಕು ಎನ್ನುವಷ್ಟರಲ್ಲಿ ಅವರು ಸಾವನ್ನಪ್ಪಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

 ಸಂದೀಪ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದ ಬೆಮೆಲ್ ಬಡಾವಣೆಯ ನಿವಾಸಿಯಾಗಿದ್ದು, ಚಿತ್ರೀಕರಣದ ನಿಮಿತ್ತ ತಮ್ಮ ಬೈಕಿನಲ್ಲಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಈ ಹಿಂದೆ ನಟ ದಿಗಂತ್ ಅವರೊಂದಿಗೆ ಸಂದೀಪ್ ಅವರು ಬಿಸಿಲೆ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,