ಪರಿಷತ್ ಚುುನಾವಣೆೆ: ಪ್ರವೀಣ್ ಪೀಟರ್ ಪರ ಪ್ರಚಾರಕ್ಕೆ ಇಳಿದ ಡಿಕೆಶಿ

ಪರಿಷತ್ ಚುುನಾವಣೆೆ: ಪ್ರವೀಣ್ ಪೀಟರ್ ಪರ ಪ್ರಚಾರಕ್ಕೆ ಇಳಿದ ಡಿಕೆಶಿ

YK   ¦    Oct 16, 2020 12:49:47 PM (IST)
ಪರಿಷತ್ ಚುುನಾವಣೆೆ: ಪ್ರವೀಣ್ ಪೀಟರ್ ಪರ ಪ್ರಚಾರಕ್ಕೆ ಇಳಿದ ಡಿಕೆಶಿ

ಬೆಂಗಳೂರು: "ಕನಕಪುರ ಬಂಡೆ" ಎಂದೇ ಖ್ಯಾತರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಸ್ವತಃ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ.

ಕನಕಪುರದ ಎಲ್ಲಾ ಶಿಕ್ಷಕರ ಸಂಘದ ಮುಖ್ಯಸ್ಥರು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು ಸೇರಿದಂತೆ ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ ಅವರ ನೇತೃತ್ವದಲ್ಲಿ ಸಭೆ ನಡೆಸಿದ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತವನ್ನು ಪ್ರವೀಣ್ ಪೀಟರ್ 'ಅವರಿಗೆ ನೀಡುವಂತೆ ಮನವಿ ಮಾಡಿಕೊಂಡರು.
ಕಾಂಗ್ರೆಸ್ ಶಾಸಕರಿರುವ ಎಲ್ಲಾ ಕ್ಷೇತ್ರಗಳ ಸಭೆ ಕರೆದಿದ್ದು ವೈಯಕ್ತಿಕವಾಗಿ ಚುನಾವಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಸೂಚಿಸಿದ್ದು ಮುಂದಿನ ದಿನಗಳಲ್ಲಿ ಆನೇಕಲ್, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಹಾಗೂ ಬೆಂಗಳೂರು ನಗರದ ಎಲ್ಲಾ ಕಾಂಗ್ರೆಸ್ ಶಾಸಕರ ಸಮ್ಮುಖದಲ್ಲಿ ಶಿಕ್ಷಕರ ಸಭೆ ನಡೆಯಲಿದೆ.

ಇದರಿಂದ ಸ್ಪಷ್ಟವಾಗುವುದೇನೆಂದರೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು ಇಲ್ಲಿ ಅಚ್ಚರಿಯ ಫಲಿತಾಂಶ ಬಂದರೆ ಆಶ್ಚರ್ಯಪಡಬೇಕಿಲ್ಲ.