ಬೆಂಗಳೂರಿನ ಗೋಡೆಗಳ ಮೇಲೆ ಫ್ರೀ ಕಾಶ್ಮೀರ ಬರಹ

ಬೆಂಗಳೂರಿನ ಗೋಡೆಗಳ ಮೇಲೆ ಫ್ರೀ ಕಾಶ್ಮೀರ ಬರಹ

HSA   ¦    Jan 14, 2020 04:15:05 PM (IST)
ಬೆಂಗಳೂರಿನ ಗೋಡೆಗಳ ಮೇಲೆ ಫ್ರೀ ಕಾಶ್ಮೀರ ಬರಹ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಪ್ರತಿಭಟನೆಯ ಗುಂಗಿನಲ್ಲಿ ಕಿಡಿಗೇಡಿಗಳು ಫ್ರೀ ಕಾಶ್ಮೀರ ಎನ್ನುವ ಬರಹವನ್ನು ಗೋಡೆಗಳ ಮೇಲೆ ಬರೆದಿರುವರು.

ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಇರುವ ಅಂಗಡಿಗಳ ಗೋಡೆಗಳ ಮೇಲೆ ಫ್ರೀ ಕಾಶ್ಮೀರ ಎಂದು ಬರೆಯಲಾಗಿದೆ.

ಇಂತಹ ಹಲವಾರು ಪ್ರಚೋದನಕಾರಿ ಬರಹಗಳು ಗೋಡೆಗಳ ಮೇಲೆ ಬರೆಯಲಾಗಿದೆ. ಬಿಜೆಪಿ ಕ್ಯಾನ್ಸರ್ ಇದ್ದಂತೆ. ಅದು ನಿಮ್ಮನ್ನು ಕೊಲ್ಲುವ ಮೊದಲು ಅದನ್ನು ನೀವು ಕೊಲ್ಲಿ. ನಾನು ನನ್ನ ದಾಖಲೆಗಳನ್ನು ತೊರಿಸುವುದಿಲ್ಲ ಎಂದು ಗೋಡೆಗಳ ಮೇಲೆ ಬರೆಯಲಾಗಿದೆ.

ಘಟನೆ ಬಗ್ಗೆ ಪೊಲೀಸರು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.