ಹೆತ್ತವರನ್ನು ಕಳೆದುಕೊಂಡ ಅನಾಥರಾದ ಮಕ್ಕಳಿಗೆ ನೆರವು ನೀಡಲು ಮುಂದಾದ ರಾಜ್ಯ ಸರ್ಕಾರ

ಹೆತ್ತವರನ್ನು ಕಳೆದುಕೊಂಡ ಅನಾಥರಾದ ಮಕ್ಕಳಿಗೆ ನೆರವು ನೀಡಲು ಮುಂದಾದ ರಾಜ್ಯ ಸರ್ಕಾರ

Ms   ¦    May 03, 2021 06:23:44 PM (IST)
ಹೆತ್ತವರನ್ನು ಕಳೆದುಕೊಂಡ ಅನಾಥರಾದ ಮಕ್ಕಳಿಗೆ ನೆರವು ನೀಡಲು ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಅನೇಕ ಮಕ್ಕಳು ಕರೋನಾ ಸೋಂಕಿನಿಂದಾಗಿ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ಅಂತಹ ಮಕ್ಕಳಿಗೆ ನೆರವು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ .

 ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸರ್ಕಾರದಿಂದ ಸೌಕರ್ಯಗಳನ್ನು ಆದ್ಯತೆಯ ಆಧಾರದ ಮೇಲೆ ಒದಗಿಸುವ ಸಲುವಾಗಿ ಅಗತ್ಯ ಕ್ರಮ ವಹಿಸಲು ಮುದ್ರಾಂಕ ಆಯುಕ್ತರಾದ ಕೆ.ಪಿ. ಮೋಹನ್‌ರಾಜ್ ರನ್ನು ರಾಜ್ಯ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದು , ಮಕ್ಕಳಿಗೆ ಎಲ್ಲಾ ಬೇಕಾದ ರೀತಿಯ ಸೌಲಭ್ಯ ನೀಡಲು ಸರ್ಕಾರ ಆದೇಶಿಸಿದೆ . 

ಈ ಆದೇಶವನ್ನು ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಜಾರಿಗೆ ತರಲಾಗಿದ್ದು, ಎಲ್ಲ ಪ್ರಾಧಿಕಾರಗಳು ಈ ಕುರಿತು ಅಗತ್ಯ ಕ್ರಮವಹಿಸಿ ಮಕ್ಕಳ ಪೋಷಣೆಗಾಗಿ ದೀರ್ಘಾವಧಿ ಸಹಕಾರ ನೀಡುವಂತೆ ನಿರ್ದೇಶನ ನೀಡಿ ಪ್ರಕಟಣೆ ಹೊರಡಿಸಲಾಗಿದೆ.