ರಾಜ್ಯದಲ್ಲಿ ಸಾವಿರ ಗಡಿ ದಾಟಿದ ಕೊರೊನಾ

ರಾಜ್ಯದಲ್ಲಿ ಸಾವಿರ ಗಡಿ ದಾಟಿದ ಕೊರೊನಾ

YK   ¦    May 15, 2020 01:01:53 PM (IST)
ರಾಜ್ಯದಲ್ಲಿ ಸಾವಿರ ಗಡಿ ದಾಟಿದ ಕೊರೊನಾ

ಬೆಂಗಳೂರು: ರಾಜ್ಯದಲ್ಲಿ ಇಂದು ಪತ್ತೆಯಾದ ೪೫ ಕೊರೊನಾ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ ೧೦೩೨ಕ್ಕೆ ಏರಿದೆ.

ಪ್ರಸ್ತುತ ೫೨೦ ಪ್ರಕರಣಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ೪೭೬ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇದುವರೆಗೆ ರಾಜ್ಯದಲ್ಲಿ ೩೫ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಇಂದು ದಕ್ಷಿಣ ಕನ್ನಡ 16, ಬೆಂಗಳೂರು 13 , ಉಡುಪಿ 05, ಹಾಸನ 03, ಬೀದರ್ 03, ಚಿತ್ರದುರ್ಗ02, ಶಿವಮೊಗ್ಗ 01, ಕೋಲಾರ 01, ಬಾಗಲಕೋಟೆಯಲ್ಲಿ 1 ಪ್ರಕರಣ ದೃಢವಾಗಿದೆ.