ಕೊರೋನಾದಿಂದಾಗಿ ಚಿತಾಗಾರದಲ್ಲಿ ಉಂಟಾದ ಉರುವಲು ಸಮಸ್ಯೆ

ಕೊರೋನಾದಿಂದಾಗಿ ಚಿತಾಗಾರದಲ್ಲಿ ಉಂಟಾದ ಉರುವಲು ಸಮಸ್ಯೆ

Ms   ¦    May 03, 2021 04:47:45 PM (IST)
ಕೊರೋನಾದಿಂದಾಗಿ ಚಿತಾಗಾರದಲ್ಲಿ ಉಂಟಾದ ಉರುವಲು ಸಮಸ್ಯೆ

ಬೆಂಗಳೂರು : ಕಳೆದ ಎರಡು ವಾರದಲ್ಲಿ ಮಾರಕ ಕೊರೋನಾ ಬೆಂಗಳೂರು ಮಹಾನಗರದಲ್ಲಿ ಸರಣಿ ಸಾವಿಗೆ ಕಾರಣವಾಗಿದೆ . ನಗರದಲ್ಲಿ ಕೊರೋನಾದಿಂದ ಮೃತಪಟ್ಟ 1400 ಮಂದಿಯ ಪಾರ್ಥಿವ ಶರೀರಗಳ ಅಂತ್ಯಕ್ರಿಯೆ ನಡೆಸಲಾಗಿದೆ . 

 

ಏಪ್ರಿಲ್ ತಿಂಗಳಲ್ಲಿ ಮಾತ್ರ ಕೊರೋನಾದಿಂದ 1812 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದರ ಜತೆಗೆ ಅಂತ್ಯಕ್ರಿಯೆಗೆ ಉರುವಲು ಸಮಸ್ಯೆ ಕೂಡ ಎದುರಾಗಿದೆ . ಕೊರೋನಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಸಾವನ್ನಪ್ಪುತ್ತಿರುವುದನ್ನು ಪರಿಗಣಿಸಿ ಮೂರು ತಾತ್ಕಾಲಿಕ ಚಿತಾಗಾರಗಳನ್ನು ಕೂಡ ನಿರ್ಮಿಸಲಾಗಿದೆ .

 

 ವ್ಯಕ್ತಿಯೊಬ್ಬನ ಅಂತ್ಯಕ್ರಿಯೆಗೆ ಕನಿಷ್ಟ 1500 ಕಿಲೊ ಸೌದೆಯ ಅಗತ್ಯವಿದ್ದು, ಪ್ರತಿದಿನ ಒಂದು ಚಿತಾಗಾರದಲ್ಲಿ 42 ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ . ಇದೀಗ ಉರುವಲು ಸಮಸ್ಯೆ ಪರಿಹರಿಸಲು ಅರಣ್ಯ ಇಲಾಖೆಯ ಮೊರೆ ಹೋಗಲು ಬಿಬಿಎಂಪಿ ನಿರ್ಧರಿಸಿದೆ ಎಂದು ವರದಿಗಳು ತಿಳಿಸುತ್ತವೆ.