ಶಾಲಾ-ಕಾಲೇಜುಗಳ ಪುನರಾರಂಭದ ಬಗ್ಗೆ ಮಾಹಿತಿ ನೀಡಿದ ಡಿಸಿಎಂ

ಶಾಲಾ-ಕಾಲೇಜುಗಳ ಪುನರಾರಂಭದ ಬಗ್ಗೆ ಮಾಹಿತಿ ನೀಡಿದ ಡಿಸಿಎಂ

Megha R Sanadi   ¦    Oct 16, 2020 03:32:46 PM (IST)
ಶಾಲಾ-ಕಾಲೇಜುಗಳ ಪುನರಾರಂಭದ ಬಗ್ಗೆ ಮಾಹಿತಿ ನೀಡಿದ ಡಿಸಿಎಂ

ಬೆಂಗಳೂರು: ಉಪ ಮುಖ್ಯಮಂತ್ರಿ ಹಾಗೂ ರಾಜ್ಯದ ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವತ್ ನಾರಾಯಣ್ ಶಾಲಾ-ಕಾಲೇಜುಗಳ ಮರು ಪ್ರಾರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ. ನವೆಂಬರ್ ಪ್ರಾರಂಭದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅನುಮತಿ ನೀಡುವುದಾಗಿ ಹೇಳಿದ್ದಾರೆ.

ಈ ತಿಂಗಳ ಕೊನೆಯವರೆಗೆ ದಸರಾ ರಜೆ ಇರುವುದರಿಂದ ರಜೆ ಕಳೆದ ಕ್ಷಣ ಶಾಲಾ-ಕಾಲೇಜುಗಳನ್ನು ಪುನರಾರಂಭಿಸಲು ಅನುಮತಿಯನ್ನು ನೀಡಲಾಗುವುದು. ಈಗಾಗಲೇ ಕೋವಿಡ್ ನಿಂದಾಗಿ ಹಲವಾರು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಪಿಯುಗೆ ಸೇರಲು ವಿದ್ಯಾರ್ಥಿಗಳು ಯೋಚಿಸುತ್ತಿದ್ದಾರೆ. ಅದರೊಂದಿಗೆ ಹಲವಾರು ಶಿಕ್ಷಕರು ಕೆಲಸವನ್ನು ಕಳೆದುಕೊಂಡಿದ್ದಾರೆ ಹಾಗೂ ಹೊಸ ನೇಮಕಾತಿಯ ಪ್ರಕ್ರಿಯೆಯು ನಡೆಯುತ್ತಿಲ್ಲ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಶಾಲಾ-ಕಾಲೇಜುಗಳನ್ನು ತೆರವುಗೊಳಿಸುವ ಆಲೋಚನೆಯನ್ನು ಮಾಡಲಾಗುತ್ತಿದೆ ಎಂದು ಅಶ್ವತ್ ನಾರಾಯಣ್ ಹೇಳಿದರು.

ಇದರೊಂದಿಗೆ ಬೆಂಗಳೂರು ಹೊರತಾಗಿ ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್ 19 ಪ್ರಕರಣಗಳ ಸಂಖ್ಯೆ ಮೊದಲಿಗೆ ಹೋಲಿಸಿದರೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಕಡಿಮೆಯಾಗಬಹುದು ಎಂಬ ಆಶಯವಿದೆ. ಹಾಗಾಗಿ ಅಕ್ಟೋಬರ್ 30 ರವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಸರಕಾರ ದಸರಾ ರಜೆಯನ್ನು ಘೋಷಿಸಿದೆ ಎಂದುಕೊಳ್ಳಬಹುದು ಎಂದಿದ್ದಾರೆ.