ಉಕ್ರೈನ್ ನಲ್ಲಿ ಔರಾದ್ ನ ಯುವಕನ ಅಪಹರಣ

ಉಕ್ರೈನ್ ನಲ್ಲಿ ಔರಾದ್ ನ ಯುವಕನ ಅಪಹರಣ

HSA   ¦    Jan 20, 2021 10:01:58 AM (IST)
ಉಕ್ರೈನ್ ನಲ್ಲಿ ಔರಾದ್ ನ ಯುವಕನ ಅಪಹರಣ

ಬೆಂಗಳೂರು: ವೈದ್ಯಕೀಯ ಅಭ್ಯಾಸಕ್ಕಾಗಿ ಉಕ್ರೈನ್ ಗೆ ತೆರಳಿದ್ದ ಬೀದರ್ ಜಿಲ್ಲೆಯ ಔರಾದ್ ನ ಯುವಕನೊಬ್ಬನನ್ನು ಅಪಹರಿಸಲಾಗಿದ್ದು, ಕೊನೆಗೆ ಆತ ಕಝಕಿಸ್ತಾನದಲ್ಲಿ ಪತ್ತೆಯಾಗಿದ್ದಾನೆ.

ರಾಜ್ಯ ಸರ್ಕಾರವು ಆತನನ್ನು ಕೂಡಲೇ ತನ್ನ ಹುಟ್ಟೂರಿಗೆ ಕರೆತರುವಂತಹ ಪ್ರಯತ್ನದಲ್ಲಿದೆ.

ಔರಾದ್ ತಾಲೂಕಿನ ಹುಳಿಯಾಳದ ಅಜಯ್ ಕುಮಾರ್ ರಾಮ ರಾವ್ ರಾಥೋಡ್ ಅವರನ್ನು ಅಪರಿಚಿತರು ಜ.16ರಂದು ಅಪಹರಿಸಿದ್ದರು. ಇದರ ಬಗ್ಗೆ ವಿದೇಶಾಂಗ ಸಚಿವಾಲಯಕ್ಕೆ ರಾಜ್ಯ ಸರ್ಕಾರವು ಮಾಹಿತಿ ನೀಡಿತ್ತು.

ಯುವಕ ಈಗ ಸುರಕ್ಷಿತವಾಗಿದ್ದಾನೆ ಎಂದು ತಿಳಿದುಬಂದಿದೆ. ಭಾರತ ಸರ್ಕಾರವು ಯುವಕನನ್ನು ಸ್ವದೇಶಕ್ಕೆ ಕಳುಹಿಸಿಕೊಡುವಂತೆ ಕಝಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದೆ. ಮುಂದಿನ ಕೆಲವು ದಿನಗಳಲ್ಲಿ ಆತ ಮರಳಿ ಸ್ವದೇಶಕ್ಕೆ ಆಗಮಿಸಲಿದ್ದಾನೆ.