ಕಾಂಗ್ರೆಸ್ ನಾಯಕ ಪ್ರಿಯಾಂಕಾ ಖರ್ಗೆ ಸ್ವಯಂ ಐಸೋಲೇಷನ್ ಗೆ

ಕಾಂಗ್ರೆಸ್ ನಾಯಕ ಪ್ರಿಯಾಂಕಾ ಖರ್ಗೆ ಸ್ವಯಂ ಐಸೋಲೇಷನ್ ಗೆ

HSA   ¦    Jun 29, 2020 03:38:43 PM (IST)
ಕಾಂಗ್ರೆಸ್ ನಾಯಕ ಪ್ರಿಯಾಂಕಾ ಖರ್ಗೆ ಸ್ವಯಂ ಐಸೋಲೇಷನ್ ಗೆ

ಬೆಂಗಳೂರು: ನೆರೆಮನೆಯವರಿಗೆ ಕೊವಿಡ್-19 ಸೋಂಕು ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರು ಸ್ವಯಂ ಐಸೋಲೇಷನ್ ಗೆ ಒಳಗಾಗಿದ್ದಾರೆ.

ನಗರದ ಸದಾಶಿವ ನಗರದಲ್ಲಿ ಇರುವ ಮನೆಯಲ್ಲಿ ಅವರು ಐಸೋಲೇಷನ್ ಗೆ ಒಳಗಾಗಿದ್ದಾರೆ.

ಸ್ವಯಂ ಐಸೋಲೇಷನ್ ನಲ್ಲಿ ಇರುವ ಕಾರಣದಿಂದಾಗಿ ತನ್ನನ್ನು ಭೇಟಿಯಾಗಲು ಬರುವುದು ಬೇಡ ಎಂದು ಪ್ರಿಯಾಂಕ ಖರ್ಗೆ ಅವರು ಮನವಿ ಮಾಡಿಕೊಂಡಿದ್ದಾರೆ. ತುರ್ತು ಕೆಲಸವಿದ್ದರೆ ಫೋನ್ ಮೂಲಕ ಮಾತನಾಡುವಂತೆ ಟ್ವೀಟ್ ಮಾಡಿರುವರು.