ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

HSA   ¦    May 11, 2019 04:06:32 PM (IST)
ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಇಳಿಕೆಯಾಗಿದ್ದು, ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ 48-50 ಪೈಸೆ ಹಾಗೂ ಡೀಸೆಲ್ 19-20 ಪೈಸೆ ಇಳಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಏರಿಳಿತವಾಗುವಂತೆ ದೇಶದಲ್ಲಿ ಪೆಟ್ರೋಲ್ ಬೆಲೆ ಕೂಡ ಏರಿಳಿಕೆ ಆಗುವುದು.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 74.51, ಡೀಸೆಲ್ ಲೀಟರ್ ಗೆ 68.49 ರೂ. ಆಗಿದೆ. ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 74.50 ರೂ. ಡೀಸೆಲ್ ಗೆ ಲೀಟರ್ ಗೆ 68.44 ರೂ. ಆಗಿದೆ. ಮೈಸೂರಿನಲ್ಲಿ ಪೆಟ್ರೋಲ್ ಲೀಟರ್ ಗೆ 74.25 ಮತ್ತು ಡೀಸೆಲ್ ಲೀಟರ್ ಗೆ 68.17 ರೂ. ಆಗಿದೆ. ಮಂಗಳೂರಿನಲ್ಲಿ ಪೆಟ್ರೋಲ್ ಲೀಟರ್ 74.17 ರೂ. ಡೀಸೆಲ್ ಬೆಲೆ ಲೀಟರ್ ಗೆ 68.04 ರೂ. ಇದೆ.