ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಕಮಲ್ ಪಂತ್ ನೇಮಕ

ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಕಮಲ್ ಪಂತ್ ನೇಮಕ

HSA   ¦    Jul 31, 2020 03:31:55 PM (IST)
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಕಮಲ್ ಪಂತ್ ನೇಮಕ

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರು ಬೆಂಗಳೂರು ನಗರದ ನೂತನ ಕಮಿಷನರ್ ಆಗಿ ನೇಮಕಗೊಂಡಿರುವರು.

ಕಮಿಷನರ್ ಆಗಿರುವ ಭಾಸ್ಕರ್ ರಾವ್ ಅವರನ್ನು ರಾಜ್ಯ ಪೊಲೀಸ್ ವಿಭಾಗದ ಆಂತರಿಕ ಭದ್ರತಾ ಪಡೆಗೆ ವರ್ಗಾಹಿಸಲಾಗಿದೆ.

ಭಾಸ್ಕರ ರಾವ್ ಅವರು ಒಂದು ವರ್ಷದಿಂದ ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿರುವರು. ಕಮಲ್ ಪಂತ್ ಅವರನ್ನು ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಶಿಸ್ತಿನ ಅಧಿಕಾರಿ ಎಂದು ಹೇಳಲಾಗುತ್ತದೆ.