ಕಾರ್ಮಿಕರ ತುಟಿಭತ್ಯೆ ತಡೆ ವಿರೋಧಿಸಿ ಪ್ರತಿಭಟನೆ

ಕಾರ್ಮಿಕರ ತುಟಿಭತ್ಯೆ ತಡೆ ವಿರೋಧಿಸಿ ಪ್ರತಿಭಟನೆ

LK   ¦    Aug 01, 2020 07:00:52 PM (IST)
ಕಾರ್ಮಿಕರ ತುಟಿಭತ್ಯೆ ತಡೆ ವಿರೋಧಿಸಿ ಪ್ರತಿಭಟನೆ

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆ ಹಾಗೂ ರಾಜ್ಯ ಸರ್ಕಾರ ಕಾರ್ಮಿಕರುಗಳಿಗೆ ನೀಡಬೇಕಾಗಿರುವ ತುಟಿಭತ್ಯೆಯನ್ನು ತಡೆಹಿಡಿದಿರುವುದನ್ನು ವಿರೋಧಿಸಿ ಅಖಿಲ ಕರ್ನಾಟಕ ಸಂಘಟಿತ ಕಾರ್ಮಿಕರ ಮಜ್ದೂರ್ ಸಂಘ ಹಾಗೂ ಐಎನ್ ಟಿಯುಸಿ ವತಿಯಿಂದ ಬೆಂಗಳೂರಿನಲ್ಲಿ  ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ರಾಜ್ಯ ಸರ್ಕಾರ ತಂದಿರುವ ಕಾನೂನುಗಳು ಕಾರ್ಮಿಕ ವಿರೋಧಿ ನೀತಿಯಾಗಿದೆ ಹೊರತು ಇದರಿಂದಾಗಿ ಸಾಕಷ್ಟು ಕೈಗಾರಿಕೆಗಳು ಮುಚ್ಚುವುದರ ಜೊತೆಗೆ ಕಾರ್ಮಿಕರಿಗೆ ಕೆಲಸ ಇಲ್ಲದೆ ಬೀದಿ ಪಾಲಾಗಿರುವುದು ಸಾಬೀತಾಗಿದ್ದು, ಇದನ್ನು ಸಹಕಾರ್ಮಿಕ ಸಂಘ ವಿರೋಧಿಸಿ ಮುಂದಿನ ದಿನಗಳಲ್ಲಿ ರಸ್ತೆಗೆ ಇಳಿದು ಹೋರಾಟ ಮಾಡುವುದಕ್ಕೆ ಹಿಂಜರಿಯುವುದಿಲ್ಲ ಈಗಾಗಲೇ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿಯನ್ನು ತಂದಿದ್ದು ಇದಕ್ಕೂ ಸಹ ರಾಜ್ಯದ ಎಲ್ಲಾ ಮೂಲೆಮೂಲೆಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ರೈತ ಕಾರ್ಮಿಕ ಸಂಘದೊಡನೆ ಕೈಜೋಡಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಮಜ್ದೂರ್ ಸಂಘದ ಅಧ್ಯಕ್ಷ ಹೆಚ್.ಕೆ. ನಾಗಭೂಷಣ್, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯಿದೆ ತಿದ್ದುಪಡಿ ರೈತಾಪಿವರ್ಗಕ್ಕೆ ಮಾರಕವಾಗಿದ್ದು, ರಿಯಲ್‍ಎಸ್ಟೇಟ್ ಮಾಫಿಯಾಗಳಿಗೆ ಅನುಕೂಲ ಮಾಡಿ ಕೂಡುವುದಾಗಿದೆ. ಸರ್ಕಾರದಿಂದ ಮಂಜೂರಾz ಜಮೀನನನ್ನು ಅತೀ ಹೆಚ್ಚಿನದರದಲ್ಲಿ ಮಾರಾಟ ಮಾಡಿ ರೈತರಿಗೆ ಅನ್ಯಾಯ ಮಾಡುವ ಕುತಂತ್ರ ಇದರಲ್ಲಿ ಅಡಗಿದೆ. ಈಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಮೂಲೆಮೂಲೆಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಮಜ್ದೂರ್ ಸಂಘ ರೈತ ಕಾರ್ಮಿಕ ಸಂಘದೊಡನೆ ಕೈಜೋಡಿಸಿ ಈ ಮಸೂದೆಯನ್ನು ಸಹ ಸವಿಸ್ತಾರವಾಗಿ ವಿರೋಧಿಸುತ್ತದೆ. ಈ ಕುರಿತಂತೆ ರಾಜ್ಯಸರ್ಕಾರ, ಕೇಂದ್ರಸರ್ಕಾರ, ಭಾರತೀಯ ಜನತಾ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರ ಕಾರ್ಮಿಕರಿಗೆ 2020 ಹಾಗೂ 2021ರ ಸಾಲಿನಲ್ಲಿ ನೀಡಬೇಕಾಗಿದ್ದ ವ್ಯತ್ಯಾಸ ತುಟ್ಟಿಭತ್ಯೆಯನ್ನು ತಡೆಹಿಡಿದಿರುವ ಬಗ್ಗೆ ನಮ್ಮ ಸಂಘಟನೆಗಳು ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾರ್ಮಿಕ ಮಂತ್ರಿಗಳು ಹಾಗೂ ಭಾರತೀಯ ಜನತಾಪಕ್ಷದ ಅಧ್ಯಕ್ಷರಿಗೆ ಲಿಖಿತವಾಗಿ ಮನವಿ ಕೊಟ್ಟಿದ್ದು ಇದು ಕನಿಷ್ಟಕಾಯಿದೆ ಹಾಗೂ ವೇತನಕಾಯಿದೆಯನ್ನು ಉಲ್ಲಂಘನೆಮಾಡಿದ್ದು ಈ ರೀತಿ ಮಾಡುವುದರಿಂದ ಒಬ್ಬ ಕಾರ್ಮಿಕನಿಗೆ ಒಂದು ವರ್ಷಕ್ಕೆ ರೂ 6000 ನಷ್ಟವಾಗುತ್ತಿದ್ದು, 30 ವರ್ಷಗಳಿಗೆ ಲೆಕ್ಕಹಾಕಿದ್ದರೆ ಒಬ್ಬ ಕಾರ್ಮಿಕನಿಗೆ ರೂ . 1,80,000ನಷ್ಟವಾಗಲಿದ್ದು, ಇದರಿಂದ ಸುಮಾರು ಲಕ್ಷಾಂತರ ಕಾರ್ಮಿಕರಿಗೆ ತೊಂದರೆ ಆಗುತ್ತಿದೆ. ಇದು ಮಾಲೀಕರಿಗೆ ಉಪಯೋಗ ಮಾಡುವಂತಾಗಿದ್ದು ಇದು ಕಾರ್ಮಿಕ ವಿರೋಧಿನೀತಿಯಾಗಿದೆ ಎಂದು ದೂರಿದ್ದಾರೆ.

ಪ್ರತಿಭಟನೆಯಲ್ಲಿ ರಾಜ್ಯಪ್ರಧಾನ ಕಾರ್ಯದರ್ಶಿ ವಿ.ವೆಂಕಟೇಶ್, ರಾಜ್ಯಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಮಜ್ದೂರ್ ಸಂಘದ ಅಧ್ಯಕ್ಷ ಹೆಚ್.ಕೆ.ನಾಗಭೂಷಣ, ಪ್ರಧಾನಕಾರ್ಯದರ್ಶಿ, ರಾಜಗೋಪಾಲ್, ಕೋಶಾಧಿಕಾರಿ ಈಶ್ವರಯ್ಯ, ಮತ್ತಿತರರು ಹಾಜರಿದ್ದರು.