ಪ್ರಧಾನಿಗೆ ಬಿಜೆಪಿ ನಾಯಕರ ಮೇಲೆ ನಂಬಿಕೆಯಿಲ್ಲ; ಡಿಕೆಶಿ ವ್ಯಂಗ್ಯ

ಪ್ರಧಾನಿಗೆ ಬಿಜೆಪಿ ನಾಯಕರ ಮೇಲೆ ನಂಬಿಕೆಯಿಲ್ಲ; ಡಿಕೆಶಿ ವ್ಯಂಗ್ಯ

Jayashree Aryapu   ¦    May 18, 2021 05:27:01 PM (IST)
ಪ್ರಧಾನಿಗೆ ಬಿಜೆಪಿ ನಾಯಕರ ಮೇಲೆ ನಂಬಿಕೆಯಿಲ್ಲ; ಡಿಕೆಶಿ ವ್ಯಂಗ್ಯ

ಬೆಂಗಳೂರು: ದೇಶದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ ಬಳಿಕ ಭಾಷಣ ಮಾಡಿದ್ದು ಕೊರೊನಾ ನಿಯಂತ್ರಣ ಮಾಡಲು ಜಿಲ್ಲಾಧಿಕಾರಿಗಳಿಗೆ ಫುಲ್​ ಪವರ್​ ನೀಡಿದ್ದಾರೆ. ಪ್ರತಿ ಜಿಲ್ಲೆಯ ಡಿಸಿ ಫೀಲ್ಡ್ ಕಮಾಂಡರ್​ನಂತೆ ಕೆಲಸ ಮಾಡಬೇಕು ಎಂದು ಪ್ರಧಾನಿ ಇಂದು ಹೇಳಿದ್ರು.

ಪ್ರಧಾನಿ ಮೋದಿಯ ಈ ಭಾಷಣದ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಬಿಜೆಪಿ ನಾಯಕರಿಗೆ ಭರ್ಜರಿ ಟಾಂಗ್​ ನೀಡಿದ್ರು. ಪ್ರಧಾನಿ ಮೋದಿಗೆ ಬಿಜೆಪಿ ನಾಯಕರು ಕೊರೊನಾ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗ್ತಾರೆ ಎಂಬ ನಂಬಿಕೆ ಇಲ್ಲ. ಹೀಗಾಗಿಯೇ ಡಿಸಿಗಳ ಜೊತೆ ಸಭೆ ನಡೆಸಿ ಅವರಿಗೆ ಅಧಿಕಾರ ನೀಡಿದ್ದಾರೆ ಎಂದು ಕುಹಕ ಮಾಡಿದ್ರು.

ಅಲ್ಲದೇ ಕೊರೊನಾ ವಿಶೇಷ ಪ್ಯಾಕೇಜ್​ ಸಂಬಂಧವೂ ಮಾತನಾಡಿದ ಅವರು, ಕಳೆದ ವರ್ಷ ಕೇಂದ್ರ ಸರ್ಕಾರ ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್​ ಇನ್ನೂ ಹಲವರ ಕೈಗೆ ಸಿಕ್ಕಿಲ್ಲ. ನೇಕಾರರು, ಮಡಿವಾಳರು ಸೇರಿದಂತೆ ಹಲವರಿಗೆ ಇನ್ನೂ ಪ್ಯಾಕೇಜ್​​ನ ಅನುದಾನ ಹಂಚಿಕೆಯಾಗಿಲ್ಲ ಎಂದು ಗುಡುಗಿದ್ರು