ಮಿಣಿ ಮಿಣಿ ಪೌಡರ್ ಹೇಳಿಕೆ ವೈರಲ್: ಇದು ಬಿಜೆಪಿಗರ ಕೀಳು ಮಟ್ಟದ ಸಂಸ್ಕೃತಿ ಎಂದ ಕುಮಾರಸ್ವಾಮಿ

ಮಿಣಿ ಮಿಣಿ ಪೌಡರ್ ಹೇಳಿಕೆ ವೈರಲ್: ಇದು ಬಿಜೆಪಿಗರ ಕೀಳು ಮಟ್ಟದ ಸಂಸ್ಕೃತಿ ಎಂದ ಕುಮಾರಸ್ವಾಮಿ

YK   ¦    Jan 27, 2020 04:34:07 PM (IST)
ಮಿಣಿ ಮಿಣಿ ಪೌಡರ್ ಹೇಳಿಕೆ ವೈರಲ್: ಇದು ಬಿಜೆಪಿಗರ ಕೀಳು ಮಟ್ಟದ ಸಂಸ್ಕೃತಿ ಎಂದ ಕುಮಾರಸ್ವಾಮಿ

ಬೆಂಗಳೂರು: ‘ಮಿಣಿ ಮಿಣಿ ಪೌಡರ್’ ಹೇಳಿಕೆ ವೈರಲ್ ವಿಚಾರಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಅಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಸ್ಫೋಟಕ ಪತ್ತೆ ಪ್ರಕರಣದ ವೇಳೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಸ್ಫೋಟಕದಲ್ಲಿ ಇದ್ದ ಗನ್ ಪೌಡರ್ ಗೆ ಮಿಣಿ ಮಿಣಿ ಪೌಡರ್ ಎಂದು ಹೇಳಿದ್ದರು. ಕೆಲವು ದಿನಗಳ ಬಳಿಕ ಈ ಹೇಳಿಕೆ ಭಾರೀ ಟ್ರೋಲ್ ಗೆ ಒಳಪಟ್ಟಿತ್ತು. ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿಯನ್ನು ನೆಟ್ಟಿಗರು ಕಾಲೆಳೆದರು.

ಇಂದು ಹೇಳಿಕೆ ವೈರಲ್ ಆದ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ಪತ್ರಿಕೆಯಲ್ಲಿ ಬಂದ ಹೇಳಿಕೆಯನ್ನು ನೀಡಿದ್ದೆ. ಆ ಮಾತು ಬಿಜೆಪಿಯಿಂದ ವೈರಲ್ ಆಗಿದೆ. ಇದು ಬಿಜೆಪಿಗರ ಕೀಳು ಅಭಿರುಚಿಯನ್ನು ವ್ಯಕ್ತಪಡಿಸುತ್ತದೆ.

ಇದು ಬಿಜೆಪಿಗರ ವಿಕೃತ ಮನೋಭಾವ, ಅಸಹ್ಯ ಆಲೋಚನೆಯನ್ನು ತೋರಿಸುತ್ತದೆ. ನನ್ನ ಜೀವನದಲ್ಲಿ ಏನಾದರೂ ತಪ್ಪು ಮಾಡಿದ್ದನ್ನು ಓಪನ್ ಆಗಿ ಹೇಳುವವನು. ನನ್ನ ಬಗ್ಗೆ ಅವಹೇಳಕಾರಿ ಹೇಳಿಕೆ ಕೊಡುತ್ತಾರೆ. ಇದು ಬಿಜೆಪಿಗರ ಕೀಳು ಮಟ್ಟದ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.