ಮೆಟ್ರೋ ಸೀಲಿಂಗ್ ಕುಸಿದು ನಾಲ್ವರಿಗೆ ಗಾಯ: ತಡವಾಗಿ ಬೆಳಕಿಗೆ

ಮೆಟ್ರೋ ಸೀಲಿಂಗ್ ಕುಸಿದು ನಾಲ್ವರಿಗೆ ಗಾಯ: ತಡವಾಗಿ ಬೆಳಕಿಗೆ

YK   ¦    Oct 04, 2019 12:30:45 PM (IST)
ಮೆಟ್ರೋ ಸೀಲಿಂಗ್ ಕುಸಿದು ನಾಲ್ವರಿಗೆ ಗಾಯ: ತಡವಾಗಿ ಬೆಳಕಿಗೆ

ಬೆಂಗಳೂರು: ನಮ್ಮ ಮೆಟ್ರೋದ ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ಮೆಟ್ರೊ ಸೀಲಿಂಗ್ ಕುಸಿದು ನಾಲ್ವರು ಸ್ವಲ್ಪದಲ್ಲೇ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸೆ.30ರಂದು ಇ ಘಟನೆ ನಡೆದಿದೆ. ಎಎಫ್ ಸಿ ಗೇಟ್ ಬಳಿ ನಾಲ್ವರು ಪ್ರಯಾಣಿಕರು ಬರುತ್ತಿದ್ದ ಸಂದರ್ಭದ ವೇಳೆ ಸೀಲಿಂಗ್ ಕುಸಿದಿದೆ.

ಅದೃಷ್ಟವಶಾತ್ ನಾಲ್ವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಸಿಸಿಟಿವಿಯಲ್ಲಿ ಈ ಎಲ್ಲ ದೃಶ್ಯಾವಳಿಗಳು ಸೆರೆಯಾಗಿದೆ. ಘಟನೆಯಲ್ಲಿ ಎಎಫ್ ಸಿ ಗೇಟ್ ಗೆ ಹಾನಿಯಾಗಿದೆ.