ಹಾಡಹಗಲೇ ಉದ್ಯಮಿಯ 10 ವರ್ಷದ ಮಗನನ್ನು ಅಪಹರಿಸಿದ ದುಷ್ಕರ್ಮಿಗಳು !

ಹಾಡಹಗಲೇ ಉದ್ಯಮಿಯ 10 ವರ್ಷದ ಮಗನನ್ನು ಅಪಹರಿಸಿದ ದುಷ್ಕರ್ಮಿಗಳು !

Nov 26, 2016 06:32:01 PM (IST)

ಬೆಂಗಳೂರು: ಉದ್ಯಮಿಯೊಬ್ಬರ 10 ವರ್ಷದ ಮಗನನ್ನು ದುಷ್ಕರ್ಮಿಗಳು ಇಂದು ಬೆಂಗಳೂರಿನಲ್ಲಿ ಅಪಹರಿಸಿದ್ದಾರೆ.

ಮಾಯಾಂಕ್ ಎಂಬ ಹೆಸರಿನ ವಿದ್ಯಾರ್ಥಿಯನ್ನು ಶಾಲೆ ಸಮೀಪವೇ ಇಂದು ಬೆಳಗ್ಗೆ ಅಪಹರಿಸಿದ್ದು, ಅಯ್ಯಪ್ಪ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ. ಶಾಲೆಗೆ ತಾತಾನ ಜೊತೆ ಬರುತ್ತಿದ್ದ ಬಾಲಕನನ್ನು ಇಯಾನ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದಾರೆ.

ದುಷ್ಕರ್ಮಿಗಳು ಬಾಲಕನನ್ನು ಕಾರಿನೊಳಗೆ ಎಳೆದೊಯ್ದು ಪರಾರಿಯಾಗಿದ್ದು, ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.