ಹೆಲ್ಮೆಟ್ ಕಡ್ಡಾಯ ನಿಯಮ ಇಂದಿನಿಂದ ರಾಜ್ಯಾದ್ಯಂತ ಜಾರಿ

ಹೆಲ್ಮೆಟ್ ಕಡ್ಡಾಯ ನಿಯಮ ಇಂದಿನಿಂದ ರಾಜ್ಯಾದ್ಯಂತ ಜಾರಿ

Jan 12, 2016 11:20:24 AM (IST)

ಬೆಂಗಳೂರು:  ಹಿಂಬದಿ ಸವಾರರಿಗೂ ಸೇರಿದಂತೆ ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್ ಕಡ್ಡಾಯ ನಿಯಮ ರಾಜ್ಯಾದ್ಯಂತ ಇಂದಿನಿಂದ ಜಾರಿಯಾಗಿದೆ.

ಜನವರಿ 1ರಿಂದಲೇ ಹೆಲ್ಮೆಟ್ ಕಡ್ಡಾಯ ಆದೇಶ ಹೊರಡಿಸಿದ್ದರೂ ಸರ್ಕಾರದ ವಿನಾಯಿತಿಯಿಂದಾಗಿ ಇಂದಿನಿಂದ ಜಾರಿಯಾಗಿದೆ. ಹೆಲ್ಮೆಟ್ ಧರಿಸದಿದ್ದರೆ ಮೊದಲ ಬಾರಿ 100 ರೂಪಾಯಿ, 2ನೇ ಬಾರಿ 200, 3ನೇ ಬಾರಿ 300 ರೂ, ಮಕ್ಕಳು ಧರಿಸದಿದ್ದರೆ 200 ರೂ. ಫೈನ್ ಕಟ್ಟಬೇಕು. ಇನ್ನು 3ಕ್ಕಿಂತ ಹೆಚ್ಚು ಬಾರಿ ಸಿಕ್ಕಿಬಿದ್ದರೆ ಸವಾರರ ಚಾಲನಾ ಪರವಾನಗಿ ರದ್ದಾಗಲಿದೆ.