ಇಂದು ರಾತ್ರಿ ತನಕ ಮಲೆನಾಡು, ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಜಾರಿ

ಇಂದು ರಾತ್ರಿ ತನಕ ಮಲೆನಾಡು, ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಜಾರಿ

HSA   ¦    Aug 06, 2020 10:22:17 AM (IST)
ಇಂದು ರಾತ್ರಿ ತನಕ ಮಲೆನಾಡು, ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಜಾರಿ

ಬೆಂಗಳೂರು: ಮಲೆನಾಡು ಪ್ರದೇಶಗಳಾಗಿರುವಂತಹ ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗದಲ್ಲಿ ಭಾರೀ ಮಳೆಯಿಂದ ಹಾನಿಯಾಗಿದ್ದು, ಅಲರ್ಟ್ ಜಾರಿ  ಮಾಡಲಾಗಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ(ಕೆಎಸ್ ಎನ್ ಡಿಎಂಸಿ) ಕರಾವಳಿ ಮತ್ತು ಮತ್ತು ಮಲೆನಾಡು ಭಾಗದಲ್ಲಿ ಗುರುವಾರ ರಾತ್ರಿ ತನಕ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಚಾರ್ಮಾಡಿ ಘಾಟಿಯ ಕೆಲವೊಂದು ಭಾಗದಲ್ಲಿ ಭಾರೀ ಭೂಕುಸಿತ ಉಂಟಾದ ಪರಿಣಾಮದಿಂದಾಗಿ ಸಂಚಾರ ಸ್ಥಗಿತ ಮಾಡಲಾಗಿದೆ.

ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾವೇರಿ ನದಿಯು ಅಪಾಯಕಾರಿ ಮಟ್ಟವನ್ನು ಮೀರಿ ಹರಿಯುತ್ತಿದೆ.