ರು.80 ಲಕ್ಷ ದರೋಡೆ ಪ್ರಕರಣ: ಆರೋಪಿ ನಿವೃತ್ತ ಡಿವೈಎಸ್ ಬಂಧನ

ರು.80 ಲಕ್ಷ ದರೋಡೆ ಪ್ರಕರಣ: ಆರೋಪಿ ನಿವೃತ್ತ ಡಿವೈಎಸ್ ಬಂಧನ

Dec 01, 2016 10:58:07 AM (IST)

ಬೆಂಗಳೂರು: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿವೈಎಸ್ ಪಿ ಬಾಬು ನರೋನಾ ಮತ್ತು ಮುಖ್ಯ ಆರೋಪಿ ಲೋಹಿತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 25 ರಂದು ನಗರದಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ರು.80 ಲಕ್ಷ ಮೌಲ್ಯದ ಹೊಸ ನೋಟುಗಳನ್ನು ಕೊಟ್ಟರೆ, ನಾವು ರು 1 ಕೋಟಿ ಮೌಲ್ಯದ ಹಳೇ ನೋಟುಗಳನ್ನು ಕೊಡುತ್ತೇವೆ’ ಎಂದು ಸತೀಶ್ ಹಾಗೂ ಶಿವರಾಂ ಎಂಬ ರಿಯಲ್‌ ಎಸ್ಟೇಟ್ ಉದ್ಯಮಿಗಳನ್ನು ನಂಬಿಸಿದ್ದರು. ಶೇ. 20 ರಷ್ಟು ಕಮಿಷನ್ ಸಿಗುತ್ತದೆ ಎಂದು ಸಹ ಹೇಳಿದ್ದರು. ಇವರ ಮಾತನ್ನು ನಂಬಿದ್ದ ಸತೀಶ್ ಮತ್ತು ಶಿವರಾಮ್ ಮನೆಯಲ್ಲಿ 2000 ಹಾಗೂ 100 ರು ನೋಟುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಈ ವೇಳೆ ಸಿಸಿಬಿ ಅಧಿಕಾರಿಗಳ ಸೋಗಿನಲ್ಲಿ ಹಣವಿದ್ದ ಮನೆ ಮೇಲೆ ದಾಳಿ ನಡೆಸಿ ಹಣವನ್ನು ಕದ್ದೊಯ್ದಿದ್ದರು.

ನೋಟು ನಿಷೇಧದ ನಂತರ ಮೊದಲು ಕಮಿಷನ್ ಗಾಗಿ ಹಣ ವಿನಿಮಯ ಮಾಡಿಕೊಡುತ್ತಿದ್ದ ನರೋನಾ, ಬೇಗ ಶ್ರೀಮಂತನಾಗುವ ದುರಾಸೆಯಿಂದ ಈ ದಾರಿ ಹಿಡಿದಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.