ಸ್ಟೇಫಿಟ್ ಸ್ಯಾನಿಟೈಸರ್ ವಿತರಿಸಿದ ನಟಿ ಭವ್ಯಗೌಡ

ಸ್ಟೇಫಿಟ್ ಸ್ಯಾನಿಟೈಸರ್ ವಿತರಿಸಿದ ನಟಿ ಭವ್ಯಗೌಡ

LK   ¦    Jun 25, 2020 06:11:54 PM (IST)
ಸ್ಟೇಫಿಟ್ ಸ್ಯಾನಿಟೈಸರ್ ವಿತರಿಸಿದ ನಟಿ ಭವ್ಯಗೌಡ

ಬೆಂಗಳೂರು: ಕೇಂದ್ರ ಸರ್ಕಾರದ ಆರೋಗ್ಯ ಭಾರತ ಅಭಿಯಾನದ ಉದ್ದೇಶ, ಆರೋಗ್ಯಕರ ಮತ್ತು ಸಧೃಡ ಭಾರತವನ್ನು ನಿರ್ಮಾಣಕ್ಕೆ ಕೈಜೋಡಿದ ಸ್ಟೇಫಿಟ್ ಸಂಸ್ಥೆ ಕೊರೋನದಿಂದ ರಕ್ಷಿಸಲು ಹ್ಯಾಂಡ್ ಸ್ಯಾನಿಟೈಸರ್ ಮತ್ತು ವ್ಯಕ್ತಿಯ ದೈಹಿಕ ಸಮತೋಲನಕ್ಕಾಗಿ ಸೇಬು ಮತ್ತು ಕಿತ್ತಳೆಯಿಂದ ತಯಾರಿಸಲಾಗಿರುವ ಸ್ಟೇಫಿಟ್ ಒ.ಆರ್.ಎಸ್ ಫಿಟ್ ಎಲೆಕ್ಟ್ರೋಲೈಟ್ ಎನರ್ಜಿಡ್ರಿಂಕ್ ಅನ್ನು ಬಿಡುಗಡೆ ಮಾಡಲಾಗಿದ್ದು, ನಟಿ ಭವ್ಯಗೌಡ ಕೊರೋನ ವಾರಿಯರ್ಸ್‍ಗಳಿಗೆ  ಉಚಿತವಾಗಿ ಇದನ್ನು ವಿತರಿಸಿದರು.

ವ್ಯವಸ್ಥಾಪಕ ನಿರ್ದೇಶಕ ರಾಮ್‍ಪ್ರಸಾದ್‍ರೆಡ್ಡಿ ಮಾತನಾಡಿ ಕೊರೋನದಿಂದ ವಿಶ್ವವೇ ನುಲುಗಿದ್ದು, ಕರೋನಾ ವೈರಸ್‍ನಿಂದ ರಕ್ಷಣೆ ಪಡೆಯುವುದು ಅಗತ್ಯವಾಗಿದೆ. ಭಾರತದಲ್ಲಿನ ಬೇಡಿಕೆ ಅನುಗುಣವಾಗಿ ವಿಶ್ವಆರೋಗ್ಯ ಸಂಸ್ಥೆಯಿಂದ ಅನುಮತಿ ಪಡೆದು ಹ್ಯಾಂಡ್ ಸ್ಯಾನಿಟೈಜರ್ 100 ಮಿಲಿ, 200 ಮಿಲಿ, 500 ಮಿಲಿ, 5 ಲೀಟರ್‍ ಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ತಯಾರಿಸಲಾಗಿದೆ ಎಂದರು.

ಜಯನಗರದಲ್ಲಿ ನಡೆದ ಸಮಾರಂಭದಲ್ಲಿ ಡಿಜಿಟೆಲ್ ಬ್ರಾಂಡ್ ರಾಯಭಾರಿ ಮತ್ತು ವಿಜ್ಸನ್ ಡಿಜಿಟಲ್ ಇಂಡಿಯಾದ ಅಧ್ಯಕ್ಷ ಡಾ. ಹರಿಕೃಷ್ಣ ಮಾರಮ್,   ಸ್ಟೇಫಿಟ್ ಕಂಪನಿಯ ಸಂಸ್ಥಾಪಕ ಡಾ. ಗುರುಕುಲಂಗಣಪತಿರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಜಿ.ಕೆ.ರಾಮ್‍ಪ್ರಸಾದ್‍ರೆಡ್ಡಿ ಮತ್ತು ಮುಖ್ಯಕಾರ್ಯನಿರ್ವಾಹಕ ಜಿ.ಕೆ.ವಂಶಿ ರೆಡ್ಡಿ ಭಾಗವಹಿಸಿದ್ದರು.