ಬೆಂಗಳೂರು: ಕುಖ್ಯಾತ ರೌಡಿಗಳ ಕಾಲಿಗೆ ಗುಂಡು ಹೊಡೆದು ಬಂಧನ

ಬೆಂಗಳೂರು: ಕುಖ್ಯಾತ ರೌಡಿಗಳ ಕಾಲಿಗೆ ಗುಂಡು ಹೊಡೆದು ಬಂಧನ

YK   ¦    Jan 13, 2020 12:24:10 PM (IST)
ಬೆಂಗಳೂರು: ಕುಖ್ಯಾತ ರೌಡಿಗಳ ಕಾಲಿಗೆ ಗುಂಡು ಹೊಡೆದು ಬಂಧನ

ಬೆಂಗಳೂರು: ಇಬ್ಬರು ಕುಖ್ಯಾತಿ ರೌಡಿಗಳ ಕಾಲಿಗೆ ಗುಂಡು ಹಾರಿಸಿ ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಭಾನುವಾರ ರಾತ್ರಿ ಬಿಟಿಎಂ ಬಳಿ ರಂಕಾ ಕಾಲೊನಿಯಲ್ಲಿ ನಡೆದಿದೆ.

ಗುಂಡೇಟು ತಿಂದ ರೌಡಿಗಳನ್ನು ಸತೀಶ ಅಲಿಯಾಸ್ ಶೆಡ್ಕ(29) ಮತ್ತು ಹಂದಿ ಮಹೇಶ(32) ಎಂದು ಗುರುತಿಸಲಾಗಿದೆ. ಇವರಿಬ್ಬರ ವಿರುದ್ಧ ಕೊಲೆ, ಹಲ್ಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ.

ತಲೆಮರೆಸಿಕೊಂಡಿದ್ದವರ ಬಂಧನಕ್ಕಾಗಿ ವಾರೆಂಟ್ ಹೊರಡಿಸಲಾಗಿತ್ತು. ಭಾನುವಾರ ರಾತ್ರಿ ಬಿಟಿಎಂ ಕೆರೆಯ ಬಳಿ ಇರುವ ಮಾಹಿತಿ ಲಭಿಸಿ ಅಲ್ಲಿಗೆ ಬಂದ ಸಿಸಿಬಿ ಇನ್ ಸ್ಪೆಕ್ಟರ್ ಪುನೀತ್ ಮತ್ತು ಕೇಶವಮೂರ್ತಿ ನೇತೃತ್ವದ ತಂಡ ಬಂಧನಕ್ಕೆ ಪ್ರಯತ್ನಿಸಿದರು. ಈ ವೇಳೆ ಆರೋಪಿಗಳು ತಪ್ಪಿಸಲು ಯತ್ನಿಸಿದಾಗ ರೌಡಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ. ಗಾಯಗೊಂಡ ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.