ಪ್ರವಾಸಕ್ಕೆಂದು ತೆರಳಿದ ಕಾರು ಪಲ್ಟಿ: ಏಳು ಯುವಕರ ಸಾವು

ಪ್ರವಾಸಕ್ಕೆಂದು ತೆರಳಿದ ಕಾರು ಪಲ್ಟಿ: ಏಳು ಯುವಕರ ಸಾವು

Jan 09, 2016 11:36:56 AM (IST)

ಬೆಂಗಳೂರು: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಜನಿವಾರ ಗ್ರಾಮದ ಬಳಿ ಕೆರೆಗೆ ಸ್ಕಾರ್ಪಿಯೊ ಪಲ್ಟಿ ಹೊಡೆದ ಪರಿಣಾಮ 7 ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದ್ದ ಯುವಕರು ಬೆಂಗಳೂರಿನ ಹೊರವಲಯದ ಬಿಡದಿಯಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಕಂಪನಿಗೆ ಸೇರಿದ ಉದ್ಯೋಗಿಗಳಾಗಿದ್ದು, ಯುವಕರ ಗುಂಪು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಸ್ಕಾರ್ಪಿಯೋ ಕಾರಿನಲ್ಲಿ ಪ್ರವಾಸಕ್ಕೆಂದು ತೆರಳಿದ್ದರು. ನಿನ್ನೆ ತಡರಾತ್ರಿ ಯುವಕರಿದ್ದ ಕಾರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಇದ್ದಕ್ಕಿದ್ದಂತೆ ಜನಿವಾರ ಗ್ರಾಮದ ಕೆರೆಗೆ ಪಲ್ಟಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಜನಾರ್ದನ್ (22), ಕಾರ್ತಿಕ್ (24), ಸತೀಶ್ (24), ದಿಲೀಪ್ (24), ಜಯಂತ್ (23), ಶಿವಸ್ವಾಮಿ (24), ರಾಜು (24) ಎಂಬುವವರು ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಯುವಕರು ಪಾರಾಗಿದ್ದಾರೆ.