ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ: 6 ಯುವತಿಯರ ರಕ್ಷಣೆ, ಓರ್ವನ ಬಂಧನ

ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ: 6 ಯುವತಿಯರ ರಕ್ಷಣೆ, ಓರ್ವನ ಬಂಧನ

YK   ¦    Jan 28, 2020 12:53:05 PM (IST)
ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ: 6 ಯುವತಿಯರ ರಕ್ಷಣೆ, ಓರ್ವನ ಬಂಧನ

ಬೆಂಗಳೂರು: ಉದ್ಯೋಗದ ಆಮಿಷವೊಡ್ಡಿ ಯುವತಿಯರನ್ನು ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಸೂರ್ಯ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರು ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಆರೋಪಿ ಸೂರ್ಯ ಉದ್ಯೋಗದ ಆಮೀಷವೊಡ್ಡಿ ಹೊರ ದೇಶ ಹಾಗೂ ಹೊರ ರಾಜ್ಯದ ಯುವತಿಯರನ್ನು ರಾಜ್ಯಕ್ಕೆ ಕರೆತಂದು ಅವರನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದ.

ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ದಾಳಿ ಮಾಡಿ ಸೂರ್ಯನನ್ನು ಬಂಧಿಸಲಾಗಿದೆ. ದಾಳಿ ವೇಳೆ ಆರೋಪಿಗಳಾದ ಅಬ್ದುಲ್ ಮುಕೀದ್, ಗುರುರಾಜ್ ಹಾಗೂ ಪ್ರಜ್ವಲ್ ತಪ್ಪಿಸಿಕೊಂಡಿದ್ದಾರೆ. ಅವರಿಗಾಗಿ ತನಿಖೆ ನಡೆಯುತ್ತಿದೆ.