ಏಳು ಮಂದಿ ನೂತನ ಸಚಿವರ ಪ್ರಮಾಣ ವಚನ ಸಂಪೂರ್ಣ

ಏಳು ಮಂದಿ ನೂತನ ಸಚಿವರ ಪ್ರಮಾಣ ವಚನ ಸಂಪೂರ್ಣ

MS   ¦    Jan 13, 2021 05:18:53 PM (IST)
ಏಳು ಮಂದಿ ನೂತನ ಸಚಿವರ ಪ್ರಮಾಣ ವಚನ ಸಂಪೂರ್ಣ

ಬೆಂಗಳೂರು: ಏಳು ಮಂದಿ ಶಾಸಕರು ಇಂದು ಮಧ್ಯಾಹ್ನ 3: 50ಕ್ಕೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ವಜೂಬಾಯಿ ಶಾಲಾ ಅವರು ಅಧಿಕಾರ ಹಾಗೂ ಗೋಪ್ಯತೆಯ ಪ್ರಮಾಣ ವಚನವನ್ನು ಬೋಧನೆ ಮಾಡಿದರು.

 

ಇಂದಿನ ಪ್ರಮಾಣವಚನದ ಸ್ವೀಕರಿಸಿದವರಲ್ಲಿ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ, ಸುಳ್ಯ ಶಾಸಕ ಎಸ್ ಅಂಗಾರ, ಮುರುಗೇವಿಶ್ ನಿರಾಣಿ, ಎಂ ಟಿ ಬಿ ನಾಗರಾಜ್, ಆರ್ ಶಂಕರ್, ಸಿಪಿ ಯೋಗೇಶ್ವರ್ ಭಾಗಿಯಾಗಿದ್ದರು. 

 

ಈ ಸಚಿವ ಸಂಪುಟ ವಿಸ್ತರಣೆಯ ಮೂಲಕ ಮುಖ್ಯಮಂತ್ರಿ ಬಿಎಸ್ ವೈ ಅವರ ಸಂಪುಟದಲ್ಲಿ ಒಟ್ಟು ಸದಸ್ಯರ ಸಂಖ್ಯೆ 33 ಕ್ಕೆ ಏರಿದೆ.