ಡಾ.ರಾಜೇಂದ್ರ ಕುಮಾರ್ ಅವರಿಂದ ಕೋವಿಡ್ ಐಸೋಲೇಷನ್ ಸೆಂಟರ್ ಕೊಡುಗೆ : ಶಾಸಕ ಕಾಮತ್

ಡಾ.ರಾಜೇಂದ್ರ ಕುಮಾರ್ ಅವರಿಂದ ಕೋವಿಡ್ ಐಸೋಲೇಷನ್ ಸೆಂಟರ್ ಕೊಡುಗೆ : ಶಾಸಕ ಕಾಮತ್

Ms   ¦    May 03, 2021 07:01:03 PM (IST)
ಡಾ.ರಾಜೇಂದ್ರ ಕುಮಾರ್ ಅವರಿಂದ ಕೋವಿಡ್ ಐಸೋಲೇಷನ್ ಸೆಂಟರ್ ಕೊಡುಗೆ : ಶಾಸಕ ಕಾಮತ್

ಬೆಂಗಳೂರು: ನಗರದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಐಸೋಲೇಷನ್ ಸೆಂಟರ್ ಹಾಗೂ ಅದಕ್ಕೆ ಮೂಲಭೂತ ಸೌಕರ್ಯ ಒದಗಿಸುವ ಕುರಿತು ಎಸ್.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾದ ಡಾ. ರಾಜೇಂದ್ರ ಕುಮಾರ್ ಅವರನ್ನು ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಅವರು ಭೇಟಿ ಮಾಡಿದರು. 

 

ನಗರದ ಹೃದಯಭಾಗದಲ್ಲಿ ಐಸೋಲೇಷನ್ ಸೆಂಟರ್ ತೆರೆದು ಅಗತ್ಯವಿರುವ ಕೋವಿಡ್ ಸೋಂಕಿತರ ಸೇವೆಗಾಗಿ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ಉಪಕರಣ ಹಾಗೂ ನಿರ್ವಹಣೆಯ ಕುರಿತು ಚರ್ಚೆ ನಡೆಯಿತು. ಎಸ್.ಡಿ.ಸಿ.ಸಿ ಬ್ಯಾಂಕ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜಂಟಿಯಾಗಿ ಈ ಆಸ್ಪತ್ರೆಯ ನಿರ್ವಹಣೆ ಮಾಡಲಿದೆ. ಶಾಸಕ ವೇದವ್ಯಾಸ್ ಕಾಮತ್ ಅವರ ಬೇಡಿಕೆಗೆ ಸ್ಪಂದಿಸಿದ ಡಾ. ರಾಜೇಂದ್ರ ಕುಮಾರ್ ಆಸ್ಪತ್ರೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕಾಗಿ‌ ಶಾಸಕ ಕಾಮತ್ ಜಿಲ್ಲೆಯ ಜನತೆಯ ಪರವಾಗಿ ಡಾ. ರಾಜೇಂದ್ರ ಕುಮಾರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. 

 

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ‌ ಶೆಟ್ಟಿ ಹಾಗೂ ಪಾಲಿಕೆ ಮುಖ್ಯ ಸಚೇತಕರೂ,ಸ್ಮಾರ್ಟ್ ಸಿಟಿ ಯೋಜನೆಯ ನಿರ್ದೇಶಕರಾಗಿ ಆಯ್ಕೆಯಾದ ಸುಧೀರ್ ಶೆಟ್ಟಿ ಕಣ್ಣೂರು ಅವರನ್ನು ಎಸ್.ಡಿ.ಸಿ.ಸಿ ಬ್ಯಾಂಕಿನ ವತಿಯಿಂದ ಡಾ. ರಾಜೇಂದ್ರ ಕುಮಾರ್ ಅವರು ಶಾಲು ಹೊದೆಸಿ ಅಭಿನಂದಿಸಿದರು. 

 

ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಮುಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ವಿಜಯ್ ಕುಮರ್ ಶೆಟ್ಟಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಹರಿಕೃಷ್ಣ, ಸೂರಜ್ ಶೆಟ್ಟಿ, ಡಾ. ಸಚ್ಚಿದಾನಂದ ರೈ, ವಿಕಾಸ್ ಕುಮಾರ್, ಸೇವಾಂಜಲಿ ಚಾರಿಟೇಬಲ್ ಪ್ರಮುಖರಾದ ನರೇಶ್ ಶೆಣೈ, ಎಸ್.ಡಿ.ಸಿ‌.ಸಿ ಬ್ಯಾಂಕಿನ ಪ್ರಮುಖರಾದ ಶಶಿಕುಮಾರ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಜಯರಾಮ್ ಭಟ್, ರವೀಂದ್ರ ಕುಮಾರ್, ಗೋಪಿನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.