ರಾಜ್ಯದ 17 ಜಿಲ್ಲೆಗೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ನೇಮಕ

ರಾಜ್ಯದ 17 ಜಿಲ್ಲೆಗೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ನೇಮಕ

YK   ¦    Jan 13, 2020 10:50:34 AM (IST)
ರಾಜ್ಯದ 17 ಜಿಲ್ಲೆಗೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ನೇಮಕ

ಬೆಂಗಳೂರು: ಬಿಜೆಪಿಯು ರಾಜ್ಯದ 17 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ಭಾನುವಾರ ನೇಮಕ ಮಾಡಿ, ಪಟ್ಟಿ ಬಿಡುಗಡೆ ಮಾಡಿದೆ.

ಆಯ್ಕೆಯಾದ ನೂತನ ಅಧ್ಯಕ್ಷರು ಹೆಚ್ಚಿನವರು ಆರ್ ಎಸ್ ಎಸ್ ಹಿನ್ನೆಲೆಯುಳ್ಳವರು.

ನೂತನವಾಗಿ ನೇಮಕಗೊಂಡ ಅಧ್ಯಕ್ಷರ ಪಟ್ಟಿ ಹೀಗಿದೆ: ಎಚ್.ಕೆ.ಸುರೇಶ್(ಹಾಸನ), ರೋಬಿನ್ ದೆವಯ್ಯ(ಕೊಡಗು) ಸುದರ್ಶನ್ ಮೂಡುಬಿದಿರೆ(ದಕ್ಷಿಣ ಕನ್ನಡ) ಎಚ್.ಸಿ.ಕಲ್ಮರುದ್ರಪ್ಪ(ಚಿಕ್ಕಮಗಳೂರು) ಟಿಡಿ ಮೇಘರಾಜ್(ಶಿವಮೊಗ್ಗ), ಸಿದ್ದರಾಜ ಕಲಕೊಟ್ಟಿ(ಹಾವೇರಿ), ಮೋಹನ್ ಮಲಶೆಟ್ಟಿ(ಗದಗ್), ಶಶಿ ಪಾಟೀಲ್( ಬೆಳಗಾವಿ ನಗರ)ಸಂಜಯ್ ಪಾಟೀಲ್(ಬೆಳಗಾವಿ ಗ್ರಾಮಾಂತರ) , ಸಂಜಯ್ ನಿರಳ್ಳಿ(ಚಿಕ್ಕೋಡಿ), ಆರ್. ಎಸ್.ಪಾಟೀಲ್(ವಿಜಯಪುರ), ಶಿವರಾಜ ಪಾಟೀಲ್ ರಡ್ಡೆವಡಿ( ಕಲಬುರ್ಗಿ ಗ್ರಾಮಾಂತರ), ಶರಣ್ ಬೋಪಾಲ್ ರೆಡ್ಡಿ(ಯಾದಗಿರಿ), ದೊಡ್ಡಣ್ಣ ಗೌಡ ಎಚ್. ಪಾಟೀಲ್(ಕೊಪ್ಪಳ) ಎ ಮುರಳಿ(ಚಿತ್ರದುರ್ಗಾ), ರಾಮಲಿಂಗಪ್ಪ(ಚಿಕ್ಕಾಬಳ್ಳಾಪುರ), ಕೆ.ಎನ್.ವೇಣುಗೋಪಾಲ(ಕೋಲಾರ) ಹಾಗೂ ಬಿ ನಾರಾಯಣ( ಬೆಂಗಳೂರು ಗ್ರಾಮಾಂತರ).