ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿ ಅಂತಿಮ ಪಟ್ಟಿಗೆ ಕೃತಿ ಕಾರಂತ್

ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿ ಅಂತಿಮ ಪಟ್ಟಿಗೆ ಕೃತಿ ಕಾರಂತ್

HSA   ¦    May 11, 2019 04:44:43 PM (IST)
ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿ ಅಂತಿಮ ಪಟ್ಟಿಗೆ ಕೃತಿ ಕಾರಂತ್

ಬೆಂಗಳೂರು: ಡಾ.ಶಿವರಾಮ ಕಾರಂತ್ ಅವರ ಮೊಮ್ಮಗಳು ಪರಿಸರ ತಜ್ಞೆ ಡಾ. ಕೃತಿ ಕಾರಂತ್ ಅವರು 2019ರ ಎಂಟರ್ ಪ್ರೈಸ್ ರೋಲೆಕ್ಸ್ ಪ್ರಶಸ್ತಿ ಅಂತಿಮ ಪಟ್ಟಿಗೆ ಆಯ್ಕೆಯಾಗಿದ್ದಾರೆ.

ಜೂನ್ 12ರಂದು ಡಾ. ಕಾರಂತ್ ಅವರು ನ್ಯಾಶನಲ್ ಜಿಯಾಗ್ರಾಫಿಕ್ ಸೊಸೈಟಿಯಲ್ಲಿ ತಮ್ಮ ಪರಿಸರ ಸಂಬಂಧಿತ ಕುರಿತಾಗಿ ಪ್ರಸ್ತುತಪಡಿಸಲಿದ್ದಾರೆ. ಇದರ ಬಳಿಕ ರೋಲೆಕ್ಸ್ ತೀರ್ಪುಗಾರರು ತಮ್ಮ ಮತ ಚಲಾಯಿಸಿ, ಐದು ಮಂದಿ ಪ್ರಶಸ್ತಿ ವಿಜೇತರನ್ನು ಘೋಷಿಸಲಿರುವರು. ಪ್ರಶಸ್ತಿ ಒಟ್ಟು 200000 ಸ್ವಿಸ್ ಫ್ರಾಂಕ್ ಮೌಲ್ಯ ಹೊಂದಿದೆ. ಅಂದರೆ ಸುಮಾರು 1.5 ಕೋಟಿ ರೂ. ಮೊತ್ತ ಪಡೆಯಲಿರುವರು.

ಕೃತಿ ಅವರು ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತ ಅವರ ಮೊಮ್ಮಗಳು ಮತ್ತು ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ಅವರ ಮಗಳು. ಇವರು ವನ್ಯಜೀವಿಗಳು ಮತ್ತು ಮಾನವನ ಸಂಘರ್ಷದ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದ್ದಾರೆ.