ಕೊಳಚೆ ನೀರು ಶುದ್ಧೀಕರಣ ಘಟಕದ ಮೇಲ್ಛಾವಣಿ ಕುಸಿತ: ಮೂರು ಮಂದಿ ಕಾರ್ಮಿಕರು ಮೃತ್ಯು

ಕೊಳಚೆ ನೀರು ಶುದ್ಧೀಕರಣ ಘಟಕದ ಮೇಲ್ಛಾವಣಿ ಕುಸಿತ: ಮೂರು ಮಂದಿ ಕಾರ್ಮಿಕರು ಮೃತ್ಯು

HSA   ¦    Jun 17, 2019 05:23:50 PM (IST)
ಕೊಳಚೆ ನೀರು ಶುದ್ಧೀಕರಣ ಘಟಕದ ಮೇಲ್ಛಾವಣಿ ಕುಸಿತ: ಮೂರು ಮಂದಿ ಕಾರ್ಮಿಕರು ಮೃತ್ಯು

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ ಕುಸಿದು ಮೂರು ಮಂದಿ ಕಾರ್ಮಿಕರು ಮೃತಪಟ್ಟ ಘಟನೆ ನಗರದ ಲುಂಬಿನಿ ಗಾರ್ಡನ್ ಸಮೀಪದ ಜೋಗಪ್ಪ ಲೇಔಟ್ ನಲ್ಲಿ ಸೋಮವಾರ ನಡೆದಿದೆ.

ಕೊಳಚೆ ನೀರು ಶುದ್ಧೀಕರಣದ ಘಟಕದ ಮೇಲ್ಛಾವಣಿಯು ಸೆಂಟ್ರಿಂಗ್ ಕೆಲಸದ ವೇಳೆ ಕುಸಿದು ಬಿದ್ದಿದೆ. ಮೇಲ್ಭಾವಣಿ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಅಗ್ನಿಶಾಮಕ ದಳದವರು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ಮೂರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಕಾರ್ಮಿಕರೆಲ್ಲರೂ ಪಶ್ಚಿಮ ಬಂಗಾಳದವರು ಎಂದು ತಿಳಿದುಬಂದಿದೆ. 17 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಸ್ಥಳಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.