ಇನ್ಫೊಸಿಸ್ ವಿಜ್ಞಾನಿ ಪುರಸ್ಕಾರಕ್ಕೆ 6ಮಂದಿ ಆಯ್ಕೆ

ಇನ್ಫೊಸಿಸ್ ವಿಜ್ಞಾನಿ ಪುರಸ್ಕಾರಕ್ಕೆ 6ಮಂದಿ ಆಯ್ಕೆ

YK   ¦    Nov 07, 2019 02:52:47 PM (IST)
ಇನ್ಫೊಸಿಸ್ ವಿಜ್ಞಾನಿ ಪುರಸ್ಕಾರಕ್ಕೆ 6ಮಂದಿ ಆಯ್ಕೆ

ಬೆಂಗಳೂರು: ಪ್ರಸಕ್ತ ಸಾಲಿನ ಇನ್ಫೊಸಿಸ್ ವಿಜ್ಞಾನಿ ಪುರಸ್ಕಾರಕ್ಕೆ ಬೆಂಗಳೂರು ಐಐಎಸ್ ಸಿ ವಿಜ್ಞಾನಿ ಜಿ.ಮುಗೇಶ್ ಸಹಿತ ಆರು ವಿಜ್ಞಾನಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಪಟ್ಟಿಯನ್ನು ಇಂದು ಪ್ರಕಟ ಮಾಡಿದ್ದು, ಪ್ರಶಸ್ತಿಯು 70ಲಕ್ಷ ನಗದು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು 2020ರ ಜನವರಿ 7ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಅಮೆರಿಕದ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಆನಂದ ಪಾಂಡ್ಯನ್, ಹೈದರಾಬಾದ್ ನ ಮಂಜುಳಾ ರೆಡ್ಡಿ, ಬೆಂಗಳೂರು ಐಐಎಸ್ ಸಿಯ ಇನ್ ಆರ್ಗಾನಿಕ್ ಮತ್ತು ಫಿಸಿಕಲ್ ಕೆಮಿಸ್ಟ್ರಿ ವಿಭಾಗದ ಪ್ರೊಫೆಸರ್ ಜಿ.ಮುಗೇಶ್, ಐಐಟಿ ಬಾಂಬೆಯ ಸಿನೀರಾ ಸರವಹಿ ಅವರು ಆಯ್ಕೆಯಾಗಿದ್ದಾರೆ.