ಬೆಂಗಳೂರು: ಕುರುಬ ಸಮುದಾಯವನ್ನು ಎಸ್ ಟಿಗೆ ಸೇರಿಸಬೇಕು ಎಂದು ನಡೆಯುತ್ತಿರುವ ಆಂದೋಲನದ ಹಿಂದೆ ಆರ್ ಎಸ್ ಎಸ್ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದರು.
ಪ್ರತಿಭಟನಾಕಾರರಿಗೆ ಕಾಗಿನೆಲೆ ಶ್ರೀಗಳು ಹಣ ನೀಡಿರುವರು ಎಂದು ಅವರು ಆರೋಪ ಮಾಡಿರುವರು.
ಕುರುಬ ಸಮುದಾಯವನ್ನು ಎಸ್ ಟಿಗೆ ಸೇರಿಸಲು ಯಾವುದೇ ಸಮಸ್ಯೆಯಿಲ್ಲ. ಈಗ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಬಿಜೆಪಿ ಇಲ್ಲಿ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ ಎಂದರು.