ಕಾವೇರಿ ಸಮಸ್ಯೆ: 18 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ!

ಕಾವೇರಿ ಸಮಸ್ಯೆ: 18 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ!

Sep 27, 2016 04:32:59 PM (IST)

ಬೆಂಗಳೂರು: ಕಾವೇರಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಗೆಹರಿಯದ ಸಮಸ್ಯೆಯಾಗುತ್ತಿದ್ದು, ಸುಪ್ರೀಂ ಕೋರ್ಟ್ ಮತ್ತೆ 18 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದು ರಾಜ್ಯಕ್ಕೆ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ದೀಪಕ್ ಮತ್ತು ಉದಯ್ ಲಲಿತ್ ಅವರ ದ್ವಿಸದಸ್ಯ ಪೀಠ ಸೆ.20ರ ಆದೇಶವನ್ನು ಬದಲಾಯಿಸುವಂತೆ ಕೋರಿ ಕರ್ನಾಟಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ರಾಜ್ಯದ ಪರ  ವಕೀಲ ಫಾಲಿ ಎಸ್. ನಾರಿಮನ್, ಈಗಿನ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲವೆಂದು ಹೇಳಿದ್ದು, ಇದಕ್ಕೆ ತಮಿಳುನಾಡು ಪರ ವಕೀಲ ತೀವ್ರ  ವಿರೋಧ ವ್ಯಕ್ತಪಡಿಸಿದ್ದು,  ನೀರು ಬಿಡಬೇಕೆನ್ನುವ ಕೋರ್ಟ್ ನ ಆದೇಶ ಯಾಕೆ ಪಾಲಿಸಲಿಲ್ಲ? ಎಂದು ಪ್ರಶ್ನಿಸಿದರು.

ಮೊದಲು ಕೋರ್ಟ್ ಆದೇಶ ಪಾಲಿಸಿ, ನಾಳೆಯಿಂದ 6 ಸಾವಿರ ಕ್ಯೂಸೆಕ್ ನಂತ ಒಟ್ಟು 18 ಸಾವಿರ ಕ್ಯೂಸೆಕ್  ನೀರು ಮೂರು ದಿನಗಳ ಕಾಲ ಹರಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯಕ್ಕೆ ಆದೇಶಿಸಿ, ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದೆ. ಈ ಮೂಲಕ ರಾಜ್ಯಕ್ಕೆ ಮತ್ತೆ ಕಾವೇರಿ ನೀರಿನ ವಿಚಾರದಲ್ಲಿ ಹಿನ್ನಡೆಯಾಗಿದೆ.