ಕೋವಿಡ್-19 ಪರೀಕ್ಷೆ ದರದಲ್ಲಿ ಮತ್ತಷ್ಟು ಕಡಿತ

ಕೋವಿಡ್-19 ಪರೀಕ್ಷೆ ದರದಲ್ಲಿ ಮತ್ತಷ್ಟು ಕಡಿತ

HSA   ¦    Oct 17, 2020 02:43:38 PM (IST)
ಕೋವಿಡ್-19 ಪರೀಕ್ಷೆ ದರದಲ್ಲಿ ಮತ್ತಷ್ಟು ಕಡಿತ

ಬೆಂಗಳೂರು: ಕೋವಿಡ್-19 ಪರೀಕ್ಷೆಯ ದರವನ್ನು ರಾಜ್ಯ ಸರ್ಕಾರವು ಮತ್ತಷ್ಟು ಕಡಿತಗೊಳಿಸಿದ್ದು, ಹೊಸ ಆದೇಶದಂತೆ ಆರ್ ಟಿಪಿಸಿಆರ್ ಪರೀಕ್ಷೆಯು 1200 ನಿಗದಿಪಡಿಸಲಾಗಿದೆ. ಸರ್ಕಾರ ಸೂಚಿಸಿದ ಮಾದರಿಗಳಿಗೆ 800 ರೂಪಾಯಿ ನಿಗದಿ ಮಾಡಲಾಗಿದೆ.

ಎಪ್ರಿಲ್ ನಲ್ಲಿ ಆರ್ ಟಿಪಿಸಿಆರ್ ಪರೀಕ್ಷೆ ದರವು ನಾಲ್ಕು ಸಾವಿರ ಆಗಿತ್ತು. ಈಗ ಇದು ತುಂಬಾ ಕಡಿಮೆ ದರದಲ್ಲಿ ಎಲ್ಲರ ಕೈಗೆಟುಕಲಿದೆ.

ಮನೆಯಿಂದಲೇ ಮಾದರಿ ಸಂಗ್ರಹಿಸಲು ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳು ಕೇವಲ 400 ರೂಪಾಯಿ ವಿಧಿಸಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

ಎನ್ ಎಎಟಿ ಪರೀಕ್ಷೆಗೆ ಸರ್ಕಾರವು 3800 ರೂಪಾಯಿ, ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಗೆ 500 ರೂಪಾಯಿ ನಿಗದಿ ಮಾಡಿದೆ.