ಬಿರಿಯಾನಿಯೊಳಗೆ ಗಾಂಜಾ ಇಟ್ಟು ಪತಿಗೆ ನೀಡುತ್ತಿದ್ದ ಪತ್ನಿ!

ಬಿರಿಯಾನಿಯೊಳಗೆ ಗಾಂಜಾ ಇಟ್ಟು ಪತಿಗೆ ನೀಡುತ್ತಿದ್ದ ಪತ್ನಿ!

HSA   ¦    May 14, 2019 11:08:25 AM (IST)
ಬಿರಿಯಾನಿಯೊಳಗೆ ಗಾಂಜಾ ಇಟ್ಟು ಪತಿಗೆ ನೀಡುತ್ತಿದ್ದ ಪತ್ನಿ!

ಬೆಂಗಳೂರು: ಜೈಲಿನೊಳಗಿದ್ದ ತನ್ನ ಪತಿಗೆ ಪತ್ನಿಯು ಬಿರಿಯಾನಿಯಡಿಯಲ್ಲಿ ಗಾಂಜಾ ಇಟ್ಟು ಸಾಗಾಟ ಮಾಡುತ್ತಿದ್ದ ಘಟನೆಯು ಪರಪ್ಪನ ಅಗ್ರಹಾರದ ಕೇಂದ್ರ ಕಾರಗೃಹದಲ್ಲಿ ನಡೆದಿದೆ.

ವಿಚಾರಣಾಧೀನ ಕೈದಿಯಾಗಿದ್ದ ಪತಿಗೆ ಪತ್ನಿಯು ಬಿರಿಯಾನಿಯಲ್ಲಿ ಗಾಂಜಾ ಇಟ್ಟು ನೀಡುತ್ತಿರುವುದನ್ನು ಈಗ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಮೇ 8ರಂದು ಪವಿತ್ತಾ ಕೆ ಎಂಬಾಕೆ ತನ್ನ ಪತಿ ವಿಚಾರಣಾಧೀನ ಕೈದಿ ನಾಗರಾಜ ಎಂಬಾತನಿಗೆ ಡಬ್ಬದಲ್ಲಿ ಬಿರಿಯಾನಿ ಜತೆಗೆ ಗಾಂಜಾ ಸಾಗಿಸುತ್ತಿದ್ದರು. ಇದನ್ನು ಜೈಲು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಜೈಲು ಅಧಿಕಾರಿಗಳ ದೂರು ಆಧರಿಸಿ ಈಗ ಪವಿತ್ರಾ ಹಾಗೂ ನಾಗರಾಜ್ ವಿರುದ್ಧ ದೂರು ದಾಖಲಾಗಿದೆ. ಪವಿತ್ರ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.